ಕೇರಳದಲ್ಲಿ ಅಟ್ಟಹಾಸ ಮೆರೆದ ಪಿಎಫ್​ಐ! ಸಂಘಟನೆಯ ಕಾರ್ಯಕರ್ತರಿಗೆ ಆರ್​ಎಸ್​ಎಸ್​ ಸಮವಸ್ತ್ರ ತೊಡಿಸಿ ಚೈನಿನಲ್ಲಿ ಬಂಧಿಸಿ ಮೆರವಣಿಗೆ

pfi
Published on

ತಿರುವನಂತಪುರಂ: ದೇವರ ರಾಜ್ಯ ಕೇರಳ ಇದೀಗ ಮತ್ತೊಮ್ಮೆ ಹೇಯಕೃತ್ಯವೊಂದಕ್ಕೆ ಸಾಕ್ಷಿಯಾಗಿದೆ. ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆಯ ಮೆರವಣಿಗೆಯು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ತೆನಿಪಾಲಂ ಪಟ್ಟಣದಲ್ಲಿ ಪಿಎಫ್​ಐ ಕಾರ್ಯಕರ್ತರು ಶನಿವಾರ ಮೆರವಣಿಗೆ ನಡೆಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​)ನ ಸಮವಸ್ತ್ರ ಧರಿಸಿದ್ದ ತಮ್ಮದೇ ಸಂಘಟನೆಯ ಕಾರ್ಯಕರ್ತರಿಬ್ಬರ ಕೈಗೆ ಚೈನಿನಿಂದ ಬಿಗಿದು ಅವರನ್ನು ರಸ್ತೆಯ ಮೇಲೆ ಯಾವುದೋ ಅಪರಾಧ ಮಾಡಿದವರ ರೀತಿಯಲ್ಲಿ ಕರೆದೊಯ್ಯಲಾಗಿದೆ. ಅದರ ಜತೆಯಲ್ಲಿ ಬ್ರಿಟಿಷ್​ ಅಧಿಕಾರಿಯ ಬಟ್ಟೆ ಧರಿಸಿದ್ದವರನ್ನೂ ಅಪರಾಧಿಗಳಂತೆ ಕರೆದೊಯ್ಯಲಾಗಿದೆ. ಮೆರವಣಿಗೆಯಲ್ಲಿ ಇಸ್ಲಾಮಿಕ್​ ಪಠಣೆಗಳು ಕೇಳಿಬಂದಿವೆ.

ಕೆಲವು ಮೂಲಗಳು ಇಂದು ಪಿಎಫ್‌ಐನ ರ್ಯಾಲಿಯು 1921 ರ ಮಲಬಾರ್ ಹಿಂದೂ ಜನಾಂಗೀಯ ಹತ್ಯಾಕಾಂಡ ಅಥವಾ ಮೊಪ್ಲಾ ಹತ್ಯಾಕಾಂಡದ (ಮಲಬಾರ್​ ದಂಗೆ) ಶತಮಾನೋತ್ಸವವನ್ನು ಆಚರಿಸುವ ಭಾಗವಾಗಿತ್ತು ಎನ್ನಲಾಗಿದೆ.

ಪಿಎಫ್ಐ ಈ ರೀತಿ ಮೆರವಣಿಗೆ ಮಾಡಿರುವ ಬಗ್ಗೆ ಅನೇಕ ರಾಜಕೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net