ನೆಲಮಂಗಲ: ಶೆಡ್ ನಿರ್ಮಿಸಿಕೊಂಡು ಅಕ್ರಮವಾಗಿ ನಡೆಸುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ದಂಧೆಯನ್ನು ಬೇಧಿಸುವಲ್ಲಿ ನೆಲಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ವಿಶ್ವೇಶ್ವರಪುರ ಸಮೀಪದ ಬಿಲಾಲ್ ನಗರದಲ್ಲಿ ಈ ಘಟನೆ ನಡೆದಿದೆ.
ನೆಲಮಂಗಲದ ಹುಳ್ಳೆಗೌಡನಹಳ್ಳಿಯ ಶಶಿಕುಮಾರ್ (29) ಮತ್ತು ಇಸ್ಲಾಂಪುರದ ಮೊಹಮ್ಮದ್ ಇಮ್ರಾನ್ (28) ಬಂಧಿತ ಆರೋಪಿಗಳು. ಬಂಧಿತರು ಸೂರ್ಯ ಗ್ಯಾಸ್ ಏಜೆನ್ಸಿಯಿಂದ ಅಕ್ರಮವಾಗಿ ಗ್ಯಾಸ್ ರಫ್ತು ಮಾಡಿಕೊಂಡು, ಅದಕ್ಕೆ ರೀಫಿಲ್ಲಿಂಗ್ ಮಾಡುತ್ತಿದ್ದರು. ಜತೆಗೆ ವಾಣಿಜ್ಯ ಮತ್ತು ಗೃಹ ಬಳಕೆಯ ಸಿಲಿಂಡರ್ಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳಿಂದ 35 ವಿವಿಧ ಮಾದರಿಯ ಖಾಲಿ ಸಿಲಿಂಡರ್ಗಳು, 3 ಕಬ್ಬಿಣದ ಡಿಜಿಟಲ್ ತೂಕದ ಯಂತ್ರ, ಪೈಪ್ ಮತ್ತು ಟೂಲ್ಸ್ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.