Animals : ಪ್ರಾಣಿಗಳಿಂದಲೂ ನಾವು ಬದುಕಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಕಲಿಯಬಹುದು. ಪ್ರಾಣಿಗಳಿಂದ ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉನ್ನತ ಮಟ್ಟಕ್ಕೆ ಹೋಗಬಹುದು ಮತ್ತು ದೊಡ್ಡ ಯಶಸ್ಸನ್ನೂ ಸಾಧಿಸಬಹುದು. ಹೀಗಾಗಿ ಪ್ರಾಣಿಗಳಿಂದ ಯಾವ ರೀತಿಯ ವಿಷಯಗಳನ್ನು ಕಲಿಯಬಹುದು ಎಂಬುದನ್ನು ನಾವೀಗ ತಿಳಿಯೋಣ.
ಇರುವೆಗಳೆಲ್ಲ ಒಟ್ಟಿಗೆ ಕೆಲಸ ಮಾಡುತ್ತವೆ. ಹೀಗಾಗಿ ಇರುವೆಗಳ ಮೂಲಕ ಟೀಮ್ ವರ್ಕ್ ಮಾಡುವುದು ಹೇಗೆ ಎಂಬುದನ್ನು ನಾವು ಕಲಿಯಬಹುದು. ಪ್ರತಿಯೊಂದು ಕೆಲಸದಲ್ಲಿ ಸಹಕಾರ ಹಾಗೂ ಶ್ರಮ ವಿಭಜನೆ ಇರುವೆಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಇಂತಹ ಗುಣಲಕ್ಷಣಗಳನ್ನು ಇರುವೆಗಳಿಂದ ನಾವು ಕಲಿಯಬಹುದು.
ಇನ್ನು ಜೇಡಗಳು ತಮ್ಮ ಬಲೆಗಳನ್ನು ನಿರ್ಮಿಸಲು ತುಂಬಾ ಶ್ರಮಿಸುತ್ತವೆ. ಗೂಡುಗಳನ್ನು ಹೆಣೆಯುವಲ್ಲಿ ಎಷ್ಟೇ ಬಾರಿ ಸೋತರೂ ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರುತ್ತವೆ. ಅಲ್ಲದೆ, ಅದರಲ್ಲಿ ಯಶಸ್ವಿ ಸಹ ಆಗುತ್ತವೆ. ಆದ್ದರಿಂದ ನಾವು ಅವುಗಳನ್ನು ನೋಡುವ ಮೂಲಕ ಪರಿಶ್ರಮದ ಬಗ್ಗೆ ಕಲಿಯಬಹುದು. ಯಶಸ್ವಿಯಾಗುವುದು ಹೇಗೆ? ಎಷ್ಟು ಬಾರಿ ವಿಫಲರಾಗಿದ್ದೀರಿ? ಮತ್ತೆ ಪ್ರಯತ್ನಿಸುವುದು ಹೇಗೆ? ಎಂಬುದನ್ನು ಜೇಡಗಳಿಂದ ತಿಳಿದುಕೊಳ್ಳಬಹುದು.
ಅದೇ ರೀತಿ ನಾವು ಚಿರತೆಯಿಂದ ಕೆಲವು ವಿಷಯಗಳನ್ನು ಕಲಿಯಬಹುದು. ಬೇಟೆಯಾಡುವಾಗ, ಚಿರತೆಗಳು ಸರಿಯಾದ ಅವಕಾಶ ಬರುವವರೆಗೆ ಕಾಯುತ್ತವೆ. ಹಾಗೆಯೇ ಮನುಷ್ಯರು ಕೂಡ ತಮ್ಮ ಜೀವನದಲ್ಲಿ ಬರುವ ಅವಕಾಶಕ್ಕಾಗಿ ಬಹಳ ತಾಳ್ಮೆಯಿಂದ ಕಾಯಬೇಕು.
ಇನ್ನು ಬಾತುಕೋಳಿಗಳು ಯಾವುದೇ ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಹೀಗಾಗಿ ಅವುಗಳಿಂದ ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳುವುದನ್ನು ಕಲಿಯಬಹುದು. ತೋಳಗಳ ಗುಂಪನ್ನು ನೋಡುವುದರಿಂದ ನಾವು ನಾಯಕತ್ವದ ಗುಣಗಳನ್ನು ಕಲಿಯಬಹುದು. ಇದು ಜೀವನದಲ್ಲಿ ತುಂಬಾ ಅವಶ್ಯಕ. ಹಾಗೆಯೇ, ಗೂಬೆಗಳನ್ನು ನೋಡುತ್ತಾ, ಬೇಟೆಯಾಡುವಾಗ ಅವು ಎಷ್ಟು ಗಮನ ಹರಿಸುತ್ತವೆ ಎಂಬುದನ್ನು ಅರ್ಥಮಾಡಿಕೊಂಡರೆ, ನಾವು ಕೆಲಸ ಮಾಡುವಾಗ ಅದೇ ಗಮನವನ್ನು ನೀಡಿದರೆ ನಾವು ಉನ್ನತ ಮಟ್ಟವನ್ನು ತಲುಪಬಹುದು.
ನಾವು ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪಲು ಬಯಸಿದರೆ, ನಾವು ನಾಯಿಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಅವುಗಳನ್ನು ನೋಡುವ ಮೂಲಕ ಹೇಗೆ ನಿಷ್ಠರಾಗಿರಬೇಕೆಂಬುದನ್ನು ಕಲಿಯಬಹುದು. ಹೀಗೆ ಪ್ರತಿಯೊಂದು ಪ್ರಾಣಿಗಳಲ್ಲೂ ಒಂದೊಂದು ಗುಣ ಅಡಗಿದ್ದು, ಅವುಗಳನ್ನು ನೋಡುವ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. (ಏಜೆನ್ಸೀಸ್)