ಅಲ್ಲು ಅರ್ಜುನ್ ನಟನೆಯ ‘ಪುಷ್ಪ-ರೂಲ್’ ಚಿತ್ರವು ಕಳೆದ ವಾರ ಬಿಡುಗಡೆಯಾಗಿದ್ದು, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ 500 ಕೋಟಿ ರೂ. ಕ್ಲಬ್ ಸೇರಿದೆ. ಚಿತ್ರದ ಕಂಟೆಂಟ್ ಕುರಿತಂತೆ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಈ ನಡುವೆ ನಟ ಸಿದ್ದಾರ್ಥ್ ಪರೋಕ್ಷವಾಗಿ ‘ಪುಷ್ಪ-2’ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. ಚಿತ್ರತಂಡವು ಸಿನಿಮಾ ಬಿಡುಗಡೆ ಮುನ್ನ ಬಿಹಾರದ ಪಟ್ನಾದಲ್ಲಿ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆ ಸಮಾರಂಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಲ್ಲು ಅಭಿಮಾನಿಗಳು ಸೇರಿದ್ದರು. ಒಂದಿಷ್ಟು ನೂಕುನುಗ್ಗಲು ಉಂಟಾಗಿತ್ತು. ಈ ಕುರಿತಂತೆ, ಸಿದ್ದಾರ್ಥ್, ‘ತುಂಬಾ ಜನ ಸೇರಿದ್ದಾರೆ ಎಂಬ ಮಾತ್ರಕ್ಕೆ ಚಿತ್ರವು ಗುಣಮಟ್ಟದಿಂದ ಕೂಡಿದೆ ಎಂದಲ್ಲ’ ಎಂದಿದ್ದಾರೆ. ‘ನಮ್ಮ ದೇಶದಲ್ಲಿ ಮನೆ ಮುಂದೆ ಜೆಸಿಬಿ ಅಗೆಯುತ್ತಿದೆ ಎಂದರೆ ಅದನ್ನು ನೋಡಲು ಜನ ಸೇರುತ್ತಾರೆ. ಅಂತಹದರಲ್ಲಿ ಬಿಹಾರದ ಪಾಟ್ನಾದಲ್ಲಿ ಜನ ಸೇರಿರುವುದು ಆಶ್ಚರ್ಯ ಏನಿಲ್ಲ. ಅದಕ್ಕೆ ಅಷ್ಟು ದೊಡ್ಡ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಜನ ಸೇರಿದ್ದಾರೆ ಅಷ್ಟೇ. ಅಷ್ಟಕ್ಕೂ ಜನ ಸೇರಿದ್ದಾರೆ ಎಂತ ಮಾತ್ರಕ್ಕೆ ಚಿತ್ರ ಗುಣಮಟ್ಟವಾಗಿದೆ ಎನ್ನುವುದಕ್ಕೆ ಸಂಬಂಧವಿಲ್ಲ’ ಎಂದು ಪರೋಕ್ಷ್ವಆಗಿ ಕುಟುಕಿದ್ದಾರೆ. ಈ ಹೇಳಿಕೆಗೆ ಅಲ್ಲು ್ಯಾನ್ಸ್ ಸಿದ್ದಾರ್ಥ ವಿರುದ್ಧ ಮುಗಿಬಿದ್ದಿದ್ದಾರೆ. –ಏಜೆನ್ಸೀಸ್
ಶೇಖಾವತ್‌ಗೆ ವಿರೋಧ : ‘ಪುಷ್ಪ-2’ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬನ್ವರ್ ಸಿಂಗ್ ಶೇಖಾವತ್ ಪಾತ್ರವನ್ನು ಹಾದ್ ಫಾಸಿಲ್ ಮಾಡಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಚಿತ್ರದಲ್ಲಿ ಕ್ಷತ್ರಿಯ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಕರ್ಣಿ ಸೇನಾ ಮುಖ್ಯಸ್ಥ ರಾಜಾ ಶೇಖಾವತ್ ಆರೋಪಿಸಿದ್ದಾರೆ. ‘ಈ ಚಿತ್ರವು ಕ್ಷತ್ರಿಯ ಸಮಾಜದ ಶೇಖಾವತ್ ಸಮುದಾಯಕ್ಕೆ ಅವಮಾನ ಮಾಡಿದ್ದು, ಚಿತ್ರದಲ್ಲಿ ಬಳಸಿರುವ ‘ಶೇಖಾವತ್’ ಪದವನ್ನು ತೆಗೆಯಬೇಕು’ ಎಂದು ಆಗ್ರಹಿಸಿದ್ದಾರೆ.