ನ್ಯೂಸ್

ತರಬೇತಿ ವೇಳೆ ಯುದ್ಧ ವಿಮಾನ ಪತನ; ಪ್ರಾಣಾಪಾಯದಿಂದ ಪಾರಾದ ಪೈಲಟ್

ಜೈಪುರ: ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (LAC) ತೇಜಸ್​ ತರಬೇತಿ ಕಾರ್ಯಾಚರಣೆ ವೇಳೆ ಪತನವಾಗಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆದಿದೆ.

ಅಪಾಯದಿಂದ ಪೈಲಟ್​ ಪಾರಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಭಾರತೀಯ ವಾಯುಪಡೆ, ತರಬೇತಿ ಕಾರ್ಯಾಚರಣೆ ವೇಳೆ ಜೈಸಲ್ಮೇರ್‌ ಬಳಿ ತೇಜಸ್‌ ವಿಮಾನ ಪತನಗೊಂಡಿದೆ. ಅಪಾಯದಿಂದ ಪೈಲಟ್​ ಪಾರಾಗಿದ್ದು, ಘಟನೆ ಸಂಬಂಧ ಕೂಲಂಕುಷ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಭಾರತೀಯ ವಾಯುಪಡೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.