Mumbai: ಮುಂಬೈನಲ್ಲಿ ಬೈಕ್ ಹಾಗೂ ರಿಕ್ಷಾ ಸೇರಿದಂತೆ ವಾಹನಗಳ ಮೇಲೆ ಐ ಲವ್ ಮಹಮ್ಮದ್ ಎಂದು ಬರೆದಿರುವ ಸ್ಟಿಕರ್ಗಳನ್ನು ಬಲವಂತವಾಗಿ ಅಂಟಿಸುತ್ತಿರುವ ವಿಡಿಯೋ ಇದೀಗ ವೈರಲ್ ಆದ ನಂತರ ಹಲವಾರು ವಿವಾದಗಳು ಭುಗಿಲೆದ್ದಿವೆ.
ವೈರಲ್ ಆದ ವಿಡಿಯೋದಲ್ಲಿ ನಡು ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪುರುಷರ ಗುಂಪೊಂದು ಸ್ಟಿಕ್ಕರ್ ಅಂಟಿಸುತ್ತಿರುವುದನ್ನು ತೋರಿಸಲಾಗಿದ್ದು, ಈ ಘಟನೆಯ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಜನರ ಕೋಪಕ್ಕೆ ಇನ್ನಷ್ಟು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಈ ಅಭಿಯಾನವು ತ್ವರಿತವಾಗಿ ಕೋಮು ಸಂಘರ್ಷದ ಕಾರಣವಾಗಿದ್ದು, ಹಿಂದೂ ಗುಂಪುಗಳು ಐ ಲವ್ ಮಹಾದೇವ್ ಎಂಬ ಬ್ಯಾನರ್‌ಗಳನ್ನು ಹಿಡಿದು ನಗರದಾದ್ಯಂತ ಸಮಾಂತರ ಸಭೆಗಳನ್ನು ಘೋಷಿಸಿದವು. ಇದು ಮುಸ್ಲಿಂ ಸಂಘಟನೆಗಳ ಪ್ರಚೋದನಕಾರಿ ಅಭಿಯಾನವನ್ನು ಎದುರಿಸುವ ಉಪಕ್ರಮ ಎಂದು ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಸ್ಟಿಕ್ಕರ್ ಅಭಿಯಾನದಲ್ಲಿ ಕಾನ್ಪುರದಲ್ಲಿ ಉದ್ವಿಗ್ನತೆ ಸಂಭವಿಸಿದೆ ಎಂದು ವರದಿಯಾಗಿದೆ. ಈ ವೇಳೆ ಪೊಲೀಸರು ಸಾರ್ವಜನಿಕ ರಸ್ತೆಗಳಲ್ಲಿ 'ಐ ಲವ್ ಮುಹಮ್ಮದ್' ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರು. ಇದು ಇತರ ಸಮುದಾಯಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಘಟನೆ ಬಳಿಕ ಮುಸ್ಲಿಂ ಗುಂಪುಗಳು ಮುಂಬೈನಲ್ಲಿ ಮಸೀದಿಗಳು ಹಾಗು ನಗರದ ಬೀದಿಗಳಲ್ಲಿ ಬ್ಯಾನರ್‌ಗಳನ್ನು ನಿರ್ಮಿಸಿದರು.
ಇದನ್ನೂ ಓದಿ: ದುಬೈ ಶೇಖ್ಗೆ ಓರ್ವ ಯುವತಿ ಬೇಕಾಗಿದ್ದಾಳೆ… ಸ್ವಾಮಿ ಚೈತನ್ಯಾನಂದನ ವಾಟ್ಸ್ಆ್ಯಪ್ ಚಾಟ್ ಲೀಕ್! Swami Chaitanya Nanda
ಈ ನಡತೆಗೆ ಬಜರಂಗದಳದ ಬಲಪಂಥೀಯ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬ್ಯಾನರ್ಗಳು ನಗರದಾಧ್ಯಂತ ಗಲಭೆ ಎಬ್ಬಿಸಿವೆ. ಆದರೆ, ನಾವು ಇದನ್ನು ವಿರೋಧಿಸುವುದಿಲ್ಲ, ಬದಲಿಗೆ ಇದರ ಬಗ್ಗೆ ನಮಗೆ ಅನುಮಾನವಿದೆ. ಕಾಶ್ಮೀರದಲ್ಲಿ, ಈ ಬ್ಯಾನರ್‌ಗಳನ್ನು ಹಿಡಿದ ಜನರು ಪೊಲೀಸರನ್ನು ಬೆನ್ನಟ್ಟಿದರು, ಇದು ಅಪಾಯಕಾರಿ ಸಂಕೇತವಾಗಿದೆ" ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಬ್ಯಾನರ್‌ಗಳ ವಿರುದ್ಧ ಪೊಲೀಸರ ಕ್ರಮವನ್ನು ಮುಸ್ಲಿಂ ಸಂಘಟನೆಗಳು ತಾರತಮ್ಯ ಎಂದು ಆರೋಪಿಸಿದ್ದು, ಸೆಪ್ಟೆಂಬರ್ 24 ರಂದು ಮುಂಬೈ ಮೂಲದ ರಾಜಾ ಅಕಾಡೆಮಿ ಎಂಬ ಗುಂಪೊಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ಪತ್ರವೊಂದನ್ನು ಸಲ್ಲಿಸಿತ್ತು.
ಪೊಲೀಸರ ಪಾತ್ರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ವ್ಯಕ್ತಿಗಳನ್ನು ಮೌನಗೊಳಿಸುವುದು ಅಲ್ಲ. ಇಂತಹ ಕ್ರಮಗಳು ಮುಸ್ಲಿಂ ಸಮುದಾಯದೊಳಗೆ ಭಯ ಮತ್ತು ಪರಕೀಯತೆಯನ್ನು ಸೃಷ್ಟಿಸುತ್ತವೆ ಮತ್ತು ದೇಶದ ಪ್ರಜಾಪ್ರಭುತ್ವದ ರಚನೆಯನ್ನು ದುರ್ಬಲಗೊಳಿಸುತ್ತವೆ. ಇಂತಹ ಕ್ರಮಗಳ ಸಂವಿಧಾನದ 19(1)(ಎ), 21 ಮತ್ತು 25 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಪೊಲೀಸ್ ಕ್ರಮದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮತ್ತು ತಮ್ಮ ಅಧಿಕಾರವನ್ನು ಮೀರಿದ ಆರೋಪ ಹೊತ್ತಿರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪತ್ರದಲ್ಲಿ ಬರೆಯಲಾಗಿತ್ತು. (ಏಜೆನ್ಸೀಸ್)