ನ್ಯೂಸ್

ಪೊಲೀಸ್​ ಅಧಿಕಾರಿ-ಪತ್ನಿ ಮೇಲೆ ಗುಂಡಿನ ದಾಳಿ; ಹಣ, ಮೊಬೈಲ್ ಫೋನ್​ ದೋಚಿ ಪರಾರಿ

ನವದೆಹಲಿ: ಆಘಾತಕಾರಿ ಘಟನೆ ಒಂದರಲ್ಲಿ ಪೊಲೀಸ್​ ಅಧಿಕಾರಿ ಹಾಗೂ ಅವರ ಗರ್ಭಿಣಿ ಪತ್ನಿ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಘಟನೆಯೂ ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ನಡೆದಿದ್ದು ಸದ್ಯ ಪೊಲೀಸ್​ ಅಧಿಕಾರಿ ಹಾಗು ಆತನ ಪತ್ನಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಹಣ ದೋಚಿದ ಖದೀಮರು

ಘಟನೆಯೂ ಶುಕ್ರವಾರ ರಾತ್ರಿ 9:45ರ ಸುಮಾರಿಗೆ ನಡೆದಿದ್ದು ಬುರಾರಿಯಿಂದ ಜಹಾಂಗೀರ್ಪುರಿ ಕಡೆಗೆ ತನ್ನ ಪತ್ನಿಯ ಜೊತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.

ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಂಪತಿಗಳ ಮೇಲೆ ಗುಂಡು ಹಾರಿಸಿ ಅವರ ಬಳಿ ಇದ್ದ ಮೊಬೈಲ್​ ಪೋನುಗಳು ಹಾಗು 7,000 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಪ್ರಾಣಪಾಯದಿಂದ ಪಾರು

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ದಂಪತಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸ್​ ಅಧಿಕಾರಿ ಹೊಟ್ಟೆಯ ಭಾಗ ಹಾಗೂ ಅವರ ಪತ್ನಿಗೆ ಗಲ್ಲದ ಭಾಗಕ್ಕೆ ಗುಂಡು ತಗುಲಿ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.