ಬೆಂಗಳೂರು: ಕನ್ನಡ ಚಿತ್ರರಂಗದ ಹೊಸ ಪ್ರಣಯಪಕ್ಷಿಗಳಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ವಾರವಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆ ನಂತರ ಕೆಲಸಕ್ಕೆ ಹಾಜರಾಗಿರುವ ಇಬ್ಬರೂ ಇಬ್ಬರೂ ತೆಲುಗಿನ 'ಎವಡು' ಚಿತ್ರದ ಕನ್ನಡ ರೀಮೇಕ್ ಚಿತ್ರಕ್ಕಾಗಿ ಜತೆಯಾಗಿ ಡಬ್ ಮಾಡಿದ್ದರು. ಈಗ ವಸಿಷ್ಠ ಸಿಂಹ ಅಭಿನಯದ 'ಲವ್ ಲಿ' ಚಿತ್ರದ ಸೆಟ್ಗೆ ಹರಿಪ್ರಿಯಾ ಎಂಟ್ರಿ ಕೊಟ್ಟಿದ್ದಾರೆ.
ಇದಕ್ಕೂ ಮುನ್ನ ವಸಿಷ್ಠ ಮತ್ತು ಹರಿಪ್ರಿಯಾ ಇಬ್ಬರೂ ಶುಕ್ರವಾರ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅದಾದ ನಂತರ ಕಾಣಿಯೂರು ಮಠಕ್ಕೆ ಭೇಟಿ ನೀಡಿ ವಿದ್ಯಾವಲ್ಲಭ ತೀರ್ಥ ಶ್ರೀಗಳಿಂದ ಅನುಗ್ರಹ ಮತ್ತು ಮಂತ್ರಾಕ್ಷತೆ ಪಡೆದಿದ್ದಾರೆ.
ಚೇತನ್ ಕೇಶವ್ ನಿರ್ದೇಶನದ 'ಲವ್ ಲಿ', ಬರೀ ಪ್ರೇಮಕಥೆ ಇರುವ ಚಿತ್ರವಷ್ಟೇ ಅಲ್ಲ, ರೌಡಿಸಂ ಸಹ ಇದೆಯಂತೆ. 'ಮಫ್ತಿ' ಖ್ಯಾತಿಯ ನರ್ತನ್ ಜತೆಗೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಈ ಚಿತ್ರವನ್ನು ನಿರ್ದೇಶನ ಮಾಡುವುದರ ಜತೆಗೆ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ಈ ಚಿತ್ರವನ್ನು ರವಿ ಕುಮಾರ್ ನಿರ್ಮಿಸುತ್ತಿದ್ದು, ಅನೂಪ್ ಸೀಳಿನ ಸಂಗೀತ ಮತ್ತು ಅಶ್ವಿನ್ ಕೆನಡಿ ಅವರ ಛಾಯಾಗ್ರಹಣವಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ರವಿಚಂದ್ರನ್ರಿಂದ ಹೊಸ ತರಹದ ಸಿನಿಮಾ …
ಈ ಚಿತ್ರದ ಮೂಲಕ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ಬೇಬಿ ವಂಶಿಕಾ (ಮಾಸ್ಟರ್ ಆನಂದ್ ಪುತ್ರಿ) ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ.