ನ್ಯೂಸ್

ತೋಟದಲ್ಲಿ ಕೆಲ್ಸ ಮಾಡಲು ಹೋಗಿದ್ದ ಮಹಿಳೆಯನ್ನು ಜೀವಂತ ನುಂಗಿದ ಹೆಬ್ಬಾವು! ಭಯಾನಕ ಫೋಟೋಗಳು ವೈರಲ್​

ಜಕಾರ್ತ: ಭಾರಿ ಗಾತ್ರದ ಹೆಬ್ಬಾವು ಒಂದು 54 ವರ್ಷ ಮಹಿಳೆಯೊಬ್ಬಳನ್ನು ಜೀವಂತವಾಗಿ ನುಂಗಿರುವ ಭಯಾನಕ ಘಟನೆ ಇಂಡೋನೇಷ್ಯಾದಲ್ಲಿ ನಡೆದಿರುವುದಾಗಿ ಮಂಗಳವಾರ ವರದಿಯಾಗಿದೆ.

ಮೃತ ಮಹಿಳೆಯನ್ನು ಜಹ್ರಾಹ್ (54) ಎಂದು ಗುರುತಿಸಲಾಗಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆಯಾದಾಗ, ಆಕೆಯನ್ನು ಕುಟುಂಬಸ್ಥರು ಹುಡುಕಲು ಮುಂದಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಮೃತ ಜಹ್ರಾಹ್ ಶುಕ್ರವಾರ ಜಾಂಬಿ ಪ್ರಾಂತ್ಯದ ತೋಟದಲ್ಲಿ ರಬ್ಬರ್​ ಸಂಗ್ರಹಿಸುವಾಗ ನಾಪತ್ತೆಯಾಗಿದ್ದರು. ತುಂಬಾ ಹೊತ್ತಾದರೂ ಜಹ್ರಾಹ್ ಮನೆಗೆ ಬಾರದಿದ್ದಾಗ, ಚಿಂತೆಗೀಡಾದ ಕುಟುಂಬ, ಹುಡುಕಲು ಮುಂದಾದರು. ಎರಡು ದಿನಗಳ ಬಳಿಕ ಅವರ ಕಣ್ಣಿಗೆ ಹೊಟ್ಟೆ 22 ಅಡಿ ಉದ್ದದ ಒಂದು ಬೃಹತ್​ ಹೆಬ್ಬಾವು ಕಣ್ಣಿಗೆ ಬಿದ್ದಿತು. ಗಾಬರಿಗೊಂಡ ಸ್ಥಳೀಯರು ಅದರ ಹೊಟ್ಟೆಯಲ್ಲಿ ದೊಡ್ಡ ಉಬ್ಬುವಿಕೆಯನ್ನು ಗಮನಿಸಿದರು ಮತ್ತು ಹೊಟ್ಟೆಯನ್ನು ಸೀಳಿದಾಗ ಒಳಗೆ ಜಹ್ರಾಹ್​ ಮೃತದೇಹ ಪತ್ತೆಯಾಯಿತು.

ಇದಾದ ಬಳಿಕ ಆಕ್ರೋಶಗೊಂಡ ಸ್ಥಳೀಯರು ಹೆಬ್ಬಾವಿನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಘಟನೆಯ ಬಗ್ಗೆ ಜಹ್ರಾಹ್ ​ವಾಸಿಸುತ್ತಿದ್ದ ಟೆರ್ಜುನ್ ಗಜಾ ಗ್ರಾಮದ ಮುಖ್ಯಸ್ಥ ಆಂಟೊ ಮಾತನಾಡಿ, ಹಾವು ಜಹ್ರಾಳನ್ನು ಕಚ್ಚುವ ಮೂಲಕ ದಾಳಿ ಮಾಡಿ, ನಂತರ ಅವಳನ್ನು ಉಸಿರುಗಟ್ಟಿಸಲು ಸುತ್ತಿಕೊಂಡಿದೆ ಎಂದು ನಂಬಲಾಗಿದೆ. ಇದಾದ ಬಳಿಕ ಅವಳನ್ನು ಜೀವಂತವಾಗಿ ತಲೆಯಿಂದ ಪಾದದವರೆಗೂ ಕನಿಷ್ಠ ಎರಡು ಗಂಟೆಗಳ ಕಾಲ ಹಾವು ನುಂಗಿದೆ ಎಂದು ಹೇಳಿದ್ದಾರೆ.

ಇನ್ನು ಗ್ರಾಮದಲ್ಲಿ ಭಾರಿ ಗಾತ್ರದ ಅನೇಕ ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ ಎಂದು ಆಂಟೋ ತಿಳಿಸಿದ್ದಾರೆ. ಅಲ್ಲದೆ, ಈ ಹಿಂದೆ 27 ಅಡಿ ಉದ್ದದ ಹೆಬ್ಬಾವು ಒಂದು ಪತ್ತೆಯಾಗಿತ್ತು. ಅದನ್ನು ಹಿಡಿಯಲು ಮೂವರು ಪ್ರಯತ್ನಿಸಿದಾದರೂ ಅದು ತುಂಬಾ ದಪ್ಪವಾಗಿದ್ದರಿಂದ ಸಾಧ್ಯಾವಾಗಲಿಲ್ಲ ಎಂದು ಆಂಟೋ ಹೇಳಿದರು. (ಏಜೆನ್ಸೀಸ್​)