ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಇಂದು ದೆಹಲಿಯಲ್ಲಿ ನಡೆದ 50ನೇ ಜಿಎಸ್ಟಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಆ ಪ್ರಕಾರ ಮೂರು ವಿಷಯಗಳ ಮೇಲೆ ಹೊಸದಾಗಿ ಜಿಎಸ್ಟಿ ವಿಧಿಸಲು ನಿರ್ಣಯಿಸಲಾಗಿದೆ.
ಆನ್ಲೈನ್ ಗೇಮಿಂಗ್, ಕುದುರೆ ರೇಸ್ ಹಾಗೂ ಕ್ಯಾಸಿನೊಗಳ ಮೇಲೆ ಶೇ. 28 ಜಿಎಸ್ಟಿ ವಿಧಿಸುವ ಕುರಿತು 50ನೇ ಜಿಎಸ್ಟಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಆನ್ಲೈನ್ ಗೇಮಿಂಗ್, ಕುದುರೆ ರೇಸ್, ಕ್ಯಾಸಿನೊಗಳ ಪಂಥದ ಮೊತ್ತದ ಮೇಲೆ ಪ್ರವೇಶ ಹಂತದಲ್ಲೇ ಶೇ. 28 ಜಿಎಸ್ಟಿ ವಿಧಿಸಲಾಗುವುದು. ಲಾಟರಿ, ಬೆಟ್ಟಿಂಗ್ನಂತೆ ಈ ಮೂರು ಕ್ರಿಯಾತ್ಮಕ ಹಕ್ಕುಗಳಲ್ಲ ಎಂಬ ಕುರಿತು ಜಿಎಸ್ಟಿ ನಿಯಮಗಳಲ್ಲಿ ಸೂಕ್ತ ಬದಲಾವಣೆ ತರಲಾಗುವುದು ಎಂದೂ ವಿತ್ತ ಸಚಿವೆ ಹೇಳಿದರು.