ನ್ಯೂಸ್

ಜನರಲ್ ಕೆ.ಎಸ್.ತಿಮ್ಮಯ್ಯರ ಪುತ್ರಿ ಮಿರೇಲ್ ಚಂಗಪ್ಪ ವಿಧಿವಶ

ಕೊಡಗು: ವೀರ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪುತ್ರಿ ಮಿರೇಲ್ ಚಂಗಪ್ಪ(86) ಅವರು ಶನಿವಾರ ವಿಧಿವಶವಾದರು.

ಜನರಲ್ ತಿಮ್ಮಯ್ಯ ಅವರ ಏಕೈಕ ಪುತ್ರಿ ಮಿರೇಲ್ ಅವರು ಕೊಂಗೆಟ್ಟಿರ ಮೇಜರ್​ ಚಂಗಪ್ಪ ಅವರ ಧರ್ಮಪತ್ನಿ. ಬೆಂಗಳೂರಿನಲ್ಲಿ ನೆಲೆಸಿದ್ದ ಮಿರೇಲ್ ಚಂಗಪ್ಪ ಅವರು ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದರು.