

ರಾಮನಗರ: ಚುನಾವಣೆಗೂ ಮುನ್ನ ರಾಜಕೀಯ ಭವಿಷ್ಯದ ಬಗ್ಗೆ ಬಿಜೆಪಿ ಎಂಎಲ್ಸಿ ಸಿ.ಪಿ ಯೋಗೇಶ್ವರ್ ಮಾತನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ. ಆಡಿಯೋದಲ್ಲಿ ಚುನಾವಣೆ ಬಳಿಕ ಬಿಜೆಪಿ ಸರಕಾರ ಜನಾಭಿಪ್ರಾಯದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ. ಆದರೆ, ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿ ನಾವೇ ಸರಕಾರ ರಚನೆ ಮಾಡುತ್ತೇವೆ ಎಂದು ಹೇಳಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ಅಮಿತ್ ಷಾ ಒಂಥರ ರೌಡಿ ಇದ್ದಂತೆ. ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ರಾಜಕೀಯ ಮಾಡ್ತಾರೆ ಕಣಯ್ಯ. ಈ ಬಾರಿ ನಾನು ಕುಮಾರಸ್ವಾಮಿ ವಿರುದ್ಧ ಚುನಾವಣೆಗೆ ನಿಲ್ಲುತ್ತಿದ್ದೇನೆ. ಇದೇ ಆರ್.ಅಶೋಕ್ ಬಂದು ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧಿಸಲಿ. ಅಶ್ವತ್ಥ್ ನಾರಾಯಣ್ ರಾಮನಗರದಿಂದ ಕುಮಾರಸ್ವಾಮಿ ಮಗನ ವಿರುದ್ಧ ಚುನಾವಣೆಗೆ ನಿಲ್ಲಲಿ? 2023ಕ್ಕೆ ಒಕ್ಕಲಿಗರ ನಾಯಕರು ಯಾರು? ಕುಮಾರಸ್ವಾಮಿ ವಿರುದ್ದ ಗೆದ್ದ ಮೇಲೆ ನಾನು ಏಲ್ಲೊ ಇರ್ತಿನಿ, ನಾನೇ ಸಿಎಂ ಆದರೂ ಆದೆ ಎಂದು ವೈರಲ್ ಆಗಿರುವ ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಆಡಿಯೋದಲ್ಲಿ ಏನಿದೆ?
2023ರ ಚುನಾವಣೆಯಲ್ಲಿ ಜೆಡಿಎಸ್ನ 20 ಅಭ್ಯರ್ಥಿಗಳು ಸೋಲುತ್ತಾರೆ. ಇದರಲ್ಲಿ ಗುಬ್ಬಿ ಶ್ರೀನಿವಾಸ್, ಅರಸೀಕೆರೆ ಶಿವಲಿಂಗೇಗೌಡ, ಅರಕಲಗೂಡು ಎ.ಟಿ.ರಾಮಸ್ವಾಮಿ, ಬೆಂಗಳೂರಿನ ಗನ್ ಮಂಜು, ನೆಲಮಂಗಲದ ಶ್ರೀನಿವಾಸಮೂರ್ತಿ, ಮಳವಳ್ಳಿ ಅನ್ನದಾನಿ, ಮದ್ದೂರು ಡಿ.ಸಿ.ತಮ್ಮಣ್ಣ, ಮಂಡ್ಯ ಶ್ರೀನಿವಾಸ್, ಕೆ.ಆರ್.ನಗರದ ಸಾ.ರಾ.ಮಹೇಶ್ ಅವರುಗಳು ಹೀನಾಯವಾಗಿ ಸೋಲುತ್ತಾರೆ. ರಾಮನಗರದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದರಲ್ಲಿ ಜೆಡಿಎಸ್ ಸೋಲುತ್ತದೆ. ಇದರಲ್ಲಿ ಎಚ್.ಡಿ.ಕುಮಾರಸ್ವಾಮಿ ಇದ್ದರೂ ಇರಬಹುದು. ಉತ್ತರ ಕರ್ನಾಟದಲ್ಲಿ 5 ಜೆಡಿಎಸ್ ಎಂಎಲ್ಎ ಇದ್ದಾರೆ. ಇದರಲ್ಲಿ ಮೂರು ಜನ ವಾಶ್ ಔಟ್ ಆಗುತ್ತಾರೆ. ಬಂಡೆಪ್ಪ ಕಾಶಪ್ಪನವರ್ ಜತೆಗೆ ಇನ್ನೊಬ್ಬ ಗೆಲ್ಲಬಹುದು ಅಷ್ಟೆ.
ಮೈಸೂರು ಭಾಗದಲ್ಲಿ ನಾವು, ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ಮಾಡಿದ್ದು, ನನ್ನ ಅಭಿಪ್ರಾಯದ ಪ್ರಕಾರ ಬಿಜೆಪಿ ಸರಕಾರ ಬರೋದಿಲ್ಲ. ಜನಾಭಿಪ್ರಾಯದ ಮೂಲಕವು ಬಿಜೆಪಿ ಬರುವುದಿಲ್ಲ. ಆದರೆ, ನಾವು ಬಿಜೆಪಿ ಸರಕಾರ ರಚನೆ ಮಾಡುತ್ತೇವೆ. ಮಾವಿನ ಹಣ್ಣನ್ನು ಮರೆದಲ್ಲೇ ಹಣ್ಣು ಮಾಡುವುದಕ್ಕೂ, ತಂದು ಕೆಮಿಕಲ್ ಹಾಕಿ ಹಣ್ಣು ಮಾಡುವುದಕ್ಕೂ ವ್ಯತ್ಯಾಸ ಇದೆ. ನಾವು ಎರಡಕ್ಕೂ ರೆಡಿ ಇದ್ದೇವೆ. ಕಾಂಗ್ರೆಸ್ ಸ್ಟ್ರಾಂಗ್ ಇಲ್ಲ, ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟೋಕೆ ಅವರ ಲೀಡರ್ಗಳಿಗೆ ಇಷ್ಟ ಇಲ್ಲ. ಡಾ.ಪರಮೇಶ್ವರ್ ಸಹ ಇದ್ದರಲಿ ಒಬ್ಬರು.
ಡಿ.ಕೆ.ಶಿವಕುಮಾರ್ ಸ್ಟ್ರೈಟ್ ಫಾರ್ವಡ್. ಅವರು ನಾನೇ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಇದಕ್ಕೆ ನಮ್ಮದೇನು ಸಮಸ್ಯೆ ಇಲ್ಲ. ಡಿಕೆಶಿ, ಸಿದ್ದರಾಮಯ್ಯ ಅವರಿಬ್ಬರು ನೇರ ಸ್ಪರ್ಧಿಗಳು. ನಾವು ಸಂಕ್ರಾಂತಿ ಆದ ಮೇಲೆ ಬಹಳ ಅಭಿವೃದ್ಧಿ ಮಾಡುತ್ತೇವೆ. ಮೈಸೂರು ಭಾಗದಲ್ಲಿ ಕಾಂಗ್ರಸಿಗರು ಬಹಳ ಮಂದಿ ನಮ್ಮ ಪಕ್ಷಕ್ಕೆ ಬರುತ್ತಾರೆ. ಅವರಿಂದ ನಾಲ್ಕೈದು ಕ್ಷೇತ್ರದಲ್ಲಿ ನಮಗೆ ಪ್ಲಸ್ ಆಗುತ್ತೆ. ಮಂಡ್ಯ, ಕೋಲಾರದಿಂದ ಒಬ್ಬರು ನಮ್ಮ ಕಡೆಗೆ ಬರ್ತಾರೆ. ಎಳೇಂಟು ಬಾರಿ ಸೆಂಟ್ರಲ್ ಮಿನಿಸ್ಟರ್ ಆಗಿದ್ದವರು ಬರ್ತಾರೆ. ನಮ್ಮ ಬಳಿ ಎಲ್ಲ ಮಾಹಿತಿ ಇದೆ. ನಾಳೆ ನಾಳಿದ್ದು ಕ್ಲಾರಿಟಿ ಸಿಗುತ್ತೆ. ಎಲೆಕ್ಷನ್ ಬಳಿಕ ಆಪರೇಷನ್ ಕಮಲ ಮಾಡೋದಿಲ್ಲ ಎಲೆಕ್ಷನ್ಗೂ ಮೊದಲೇ ಆಪರೇಷನ್ ಕಮಲ ಮಾಡುತ್ತೇವೆ.
ಸಿದ್ದರಾಮಯ್ಯ ಕೋಲಾರದಿಂದ ಸೋಲ್ತಾರೆ ಎಂದು ನಾನು ಹೋಳೊದಿಲ್ಲ ಮುಖ್ಯಮಂತ್ರಿ ಯಾಗಿದ್ದವರನ್ನು ನನ್ನ ಬಾಯಿಂದ ಸೋಲ್ತಾರೆ ಅಂತಾ ಏಕೆ ಹೇಳಲಿ? ಸಿದ್ದರಾಮಯ್ಯ ಗೆಲ್ಲಲಿ. ಅವರು ಗೆಲುವೆ ಅವರಿಗೆ ತೊಂದರೆ, ಅವರು ಗೆದ್ದರಷ್ಟೆ ಸಿಎಂ ಆಗೋದು? ಅವರ ಕೊನೆ ಪ್ರಯತ್ನ. ಕಾಂಗ್ರೆಸ್ನಲ್ಲಿ ಪಾಪ್ಯುಲರ್ ಎಂದರೆ ಸಿದ್ದರಾಮಯ್ಯ ಎಂದು ಹೇಳಿರುವುದು ವೈರಲ್ ಆಗಿರುವ ಆಡಿಯೋದಲ್ಲಿದೆ.