ಭಾರತ್​​​ ಜೋಡೋ ಯಾತ್ರೆ ವೇಳೆ ಪಂಜಾಬ್​ನ ಕಾಂಗ್ರೆಸ್​ ಸಂಸದ ನಿಧನ: ಆಸ್ಪತ್ರೆಗೆ ರಾಹುಲ್​ ಗಾಂಧಿ ದೌಡು

Congress MP
Published on

ಚಂಡೀಗಢ: ಭಾರತ್​​​ ಜೋಡೋ ಯಾತ್ರೆ ವೇಳೆ ಜಲಂಧರ್​ ಕ್ಷೇತ್ರದ ಕಾಂಗ್ರೆಸ್​ ಸಂಸದ ಚೌಧರಿ ಸಂತೋಖ್​ ಸಿಂಗ್ ಕೊನೆಯುಸಿರೆಳೆದಿರುವ ಘಟನೆ ಪಂಜಾಬ್​ನ ಫಿಲ್ಲೌರ್​ನಲ್ಲಿ ಇಂದು (ಜ.14) ಬೆಳಗ್ಗೆ ನಡೆದಿದೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಜೊತೆ ಸಂತೋಖ್​ ಸಿಂಗ್​ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಅವರ ಹೃದಯ ಬಡಿತ ಹೆಚ್ಚಾಗಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಆಂಬ್ಯುಲೆನ್ಸ್​ ಮೂಲಕ ಲೂಧಿಯಾನದಲ್ಲಿರುವ ವಿರ್ಕ್​ ಆಸ್ಪತ್ರೆಗೆ ದಾಖಲಿಸಲಾಯಿತು. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಯಾತ್ರೆಯನ್ನು ರದ್ದುಗೊಳಿಸಿ, ರಾಹುಲ್​ ಗಾಂಧಿ ಆಸ್ಪತ್ರೆಗೆ ತೆರಳಿದ್ದಾರೆ.

ಸಂತೋಖ್​ ಸಿಂಗ್​ ನಿಧನಕ್ಕೆ ಕಾಂಗ್ರೆಸ್​ ನಾಯಕರು ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪಂಜಾಬ್​ ಮುಖ್ಯಮಂತ್ರಿ ಭಗವಂತ್ ಮಾನ್​ ಟ್ವೀಟ್​ ಮಾಡಿದ್ದು, ಜಲಂಧರ್‌ನ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಅಕಾಲಿಕ ಮರಣದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net