ಎಲ್ರ ಜಾತಕ ನನ್ನ ಕೈಯಲ್ಲಿದೆ.. ಹುಷಾರ್! ಏನ್​ ಮಾಡ್ಬೇಕು ಅಂತ ನನ್ಗೆ ಗೊತ್ತು… ಪೊಲೀಸರಿಗೆ ಸ್ಯಾಂಟ್ರೋ ರವಿ ಅವಾಜ್​

santro ravi
Published on

ಬೆಂಗಳೂರು: 'ಎಲ್ಲರ ಜಾತಕ ನನ್ನ ಕೈಯಲ್ಲಿದೆ ಹುಷಾರ್! ಏನ್​ ಮಾಡಬೇಕು ಅಂತ ನನಗೆ ಗೊತ್ತು...' ಇದು ಪೊಲೀಸರಿಗೆ ಸ್ಯಾಂಟ್ರೋ ರವಿ ಅಲಿಯಾಸ್​ ಮಂಜುನಾಥ್​ ಅವಾಜ್​ ಹಾಕಿರೋ ಪರಿ.

ಪತ್ನಿಗೆ ವಂಚನೆ, ಅತ್ಯಾಚಾರ ಪ್ರಕರಣದ ಆರೋಪಿ, ಪೊಲೀಸ್​ ಅಧಿಕಾರಿಗಳ ವರ್ಗಾವಣೆ ದಂಧೆಯ ಕಿಂಗ್​ಪಿನ್​ ಸ್ಯಾಂಟ್ರೋ ರವಿಯನ್ನ ನಿನ್ನೆ(ಜ.13) ಗುಜರಾತ್​ನ ಅಹಮದಾಬಾದ್​ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿಯೇ ಮೈಸೂರಿಗೆ ಕರೆತಂದಾಗ 'ಪ್ರತಿಯೊಬ್ಬರ ಜಾತಕ ನನ್ನ ಬಳಿ ಇದೆ. ನಂಗೆ ಗೊತ್ತಿದೆ ಏನ್​ ಮಾಡ್ಬೇಕು' ಅಂತ ಅವಾಜ್​ ಹಾಕಿದ್ದಾನೆ.

ಸ್ಯಾಂಟ್ರೋ ರವಿ ಅದೇನ್ ಜಾತಕ ಇಟ್ಕೊಂಡಿದ್ದಾನೊ ಗೊತ್ತಿಲ್ಲ. ಇದ್ಯಾವುದಕ್ಕೂ ಜಗ್ಗದ ಮೈಸೂರು ಪೊಲೀಸರು ವಿಜಯನಗರ ಠಾಣೆಯಲ್ಲಿ ವಿಚಾರಣೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net