ನ್ಯೂಸ್

ರಸ್ತೆ ಬದಿಯಲ್ಲೇ ಮಗುಚಿಬಿದ್ದ ಗ್ಯಾಸ್​ ಟ್ಯಾಂಕರ್​!

arunakunigal

ಉತ್ತರಕನ್ನಡ: ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್​ ಟ್ಯಾಂಕರ್​ ಲಾರಿ ಪಲ್ಟಿಯಾಗಿದೆ.

ಚೆನ್ನೈದಿಂದ ಗೋವಾದತ್ತ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಮಾರ್ಗಮಧ್ಯೆ ರಸ್ತೆಬದಿ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಟ್ಯಾಂಕರ್​ನಿಂದ ಗ್ಯಾಸ್ ಸೋರಿಕೆ ಆಗಿಲ್ಲ. ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುದ್ದಿ ತಿಳಿಯುತ್ತಿದ್ದ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಅಪಾಯ ಸಂಭವಿಸದಂತೆ ಜಾಗ್ರತೆ ವಹಿಸಿದ್ದರು. ಮಂಗಳೂರಿನಿಂದ ತಜ್ಞ ತಂಡ ಆಗಮಿಸಿದ ಬಳಿಕ ಟ್ಯಾಂಕರ್ ಅನ್ನು ತೆರವು ಮಾಡಲಾಗಿದೆ. ಇದನ್ನೂ ಓದಿರಿ ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ