More

    ತನ್ವೀರ್​ ಸೇಠ್​ಗೆ ಕಾಂಗ್ರೆಸ್​ ಹೈಕಮಾಂಡ್​ ವಾರ್ನಿಂಗ್​!

    ಬೆಂಗಳೂರು: ಮೈಸೂರು ನಗರಪಾಲಿಕೆ ಮೇಯರ್ ಆಯ್ಕೆ ಸಂಬಂಧ ಕಾಂಗ್ರೆಸ್​ನಲ್ಲಿ ಭುಗಿಲೆದ್ದಿರುವ ಭಿನ್ನಾಭಿಪ್ರಾಯ ತಣಿಸಲು ಎಐಸಿಸಿ ಕಾರ್ಯದರ್ಶಿ ಮಧು ಯಷ್ಕಿಗೌಡ ಅಖಾಡಕ್ಕಿಳಿದಿದ್ದು, ಪಕ್ಷ ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸಲ್ಲ. ಮೈಸೂರು ಮೇಯರ್ ಸ್ಥಾನವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿರುವ ಹಾಗೂ ಈ ಸಂಬಂಧ ನಡೆದ ಎಲ್ಲ ಬೆಳವಣಿಗೆಯೂ ಹೈಕಮಾಂಡ್ ಗಮನದಲ್ಲಿದೆ. ತನ್ವೀರ್ ಸೇಠ್ ಆಗಲಿ ಅಥವಾ ಎಂತಹ ಹಿರಿಯ ನಾಯಕರೇ ಆದರೂ ಸರಿಯೇ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಸಹಿಸಲ್ಲ ಎಂದು ಎಚ್ಚರಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಯಷ್ಕಿಗೌಡ, ಕಾಂಗ್ರೆಸ್​ನಲ್ಲಿ ಇದ್ದುಕೊಂಡೇ ಬಿಜೆಪಿಯನ್ನ ಬೆಂಬಲಿಸೋದಾದರೆ ಅಂತವರ ಜೊತೆ ಮುಂದುವರಿಯಲ್ಲ. ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಇರಬೇಕು ಎಂಬುದು ಪಕ್ಷದ ನಿರ್ದೇಶನ. ಪಕ್ಷ ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸಲ್ಲ. ಯಾರು ಅಶಿಸ್ತು ಮಾಡಿದಾರೆ ಅನ್ನೋದು ಆಂತರಿಕ ವಿಚಾರ. ನಾನೀಗ ಮೈಸೂರಿಗೆ ಹೋಗಿ ಕಾರ್ಪೋರೇಟರ್, ಡಿಸಿಸಿ ಅಧ್ಯಕ್ಷರನ್ನು ಭೇಟಿಯಾಗುವೆ. ಜಾತ್ಯತೀತ ಅಂತ ಹೇಳಿಕೊಂಡು ಬಿಜೆಪಿ ಬೆಂಬಲಿಸುತ್ತಿರುವ ಪಕ್ಷಗಳ ಬಗ್ಗೆ ತಿಳಿದಿದೆ. ಜಾತ್ಯತೀತತೆಗೆ ಬದ್ಧವಾಗಿದ್ದವರ ಜತೆ ಹೊಂದಾಣಿಕೆಯಲ್ಲಿ ಇರುತ್ತೇವೆ ಎಂದರು. ಇದನ್ನೂ ಓದಿರಿ ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಸಿಎಲ್ಪಿ ನಾಯಕರ ವಿರುದ್ಧ ಘೋಷಣೆ ಸಹಿಸಲ್ಲ. ತನ್ವೀರ್ ಸೇಠ್ ಆಗಲಿ ಅಥವಾ ಎಂತಹ ಹಿರಿಯ ನಾಯಕರೇ ಆದರೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಸಹಿಸಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಶೋಕಾಸ್ ನೋಟಿಸ್ ಜಾರಿ ಮಾಡ್ತೇವೆ. ಪ್ರತಿಭಟನೆ ಮಾಡಿರೋದು ಗಮನಕ್ಕೆ ಬಂದಿದೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈ ಪ್ರಕರಣವನ್ನು ಶಿಸ್ತು ಸಮಿತಿಗೆ ವಹಿಸಿದ್ದೇವೆ, ಸುರ್ಜೇವಾಲ ಮತ್ತು ರೆಹಮಾನ್ ಖಾನ್ ಗಮನ ಹರಿಸುತ್ತಿದ್ದಾರೆ ಎಂದು ಮಧು ಯಷ್ಕಿಗೌಡ ಹೇಳಿದರು.

    ಮೋದಿಗಿಂತ ಸಚಿವ ಬಿ.ಸಿ.ಪಾಟೀಲ್ ದೊಡ್ಡವರಾ? ಮನೆಯಲ್ಲೇ ಕೌರವನ ದೌಲತ್ತು!

    ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

    ಮೈಸೂರು ಮೇಯರ್ ಚುನಾವಣೆ : ಶಾಸಕ ತನ್ವೀರ್ ಸೇಠ್​ಗೆ ಡಿಕೆಶಿ ಬುಲಾವ್

    ಕಾಲೇಜು ಕಟ್ಟಡದಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ! ಡೆತ್​ನೋಟ್​ ಪತ್ತೆ, ಸಹಪಾಠಿಗಳ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts