

ಹಾವೇರಿ: ಕೋವಿಡ್ ವ್ಯಾಕ್ಸಿನೇಷನ್ನಲ್ಲೂ 'ವಿವಿಐಪಿ ಸಂಸ್ಕೃತಿ' ಇದ್ಯಾ? ಇಂತಹದ್ದೊಂದು ಪ್ರಶ್ನೆ ಕೃಷಿ ಸಚಿವ ಬಿ.ಸಿ.ಪಾಟೀಲ್ರ ನಡೆ ಹುಟ್ಟುಹಾಕಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿದ್ದಾರೆ. ಆದರೆ, ಬಿ.ಸಿ.ಪಾಟೀಲ್ ಮಾತ್ರ ಆರೋಗ್ಯ ಸಿಬ್ಬಂದಿಯನ್ನ ತನ್ನ ಮನೆ ಬಾಗಿಲಿಗೇ ಕರೆಸಿಕೊಂಡು ಲಸಿಕೆ ಪಡೆದಿದ್ದಾರೆ.
ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಲಸಿಕೆ ಪಡೆದ ಕೃಷಿ ಸಚಿವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ನರೇಂದ್ರ ಮೋದಿಗಿಂತಲೂ ಬಿ.ಸಿ.ಪಾಟೀಲ್ ದೊಡ್ಡವರಾ? ಹಿರಿ ಜೀವಗಳು ಆಸ್ಪತ್ರೆ ಬಾಗಿಲಲ್ಲಿ ಕಾದರೂ ಪರವಾಗಿಲ್ಲ, ಇವರ ದೌಲತ್ತಿಗೆ ಆರೋಗ್ಯ ಸಿಬ್ಬಂದಿಯೇ ಮನೆ ಬಾಗಿಲಿಗೆ ಬಂದು ಲಸಿಕೆ ಕೊಡುತ್ತಾರೆ. ಇದೆಂಥಾ ನ್ಯಾಯ? ಜನಸಾಮಾನ್ಯರಿಗೆ ಒಂದು ಇವರಿಗೊಂದು ಏಕೆ? ಕೋವಿಡ್ ಲಸಿಕೆ ವಿಚಾರದಲ್ಲೂ ವಿವಿಐಪಿ ಸಂಸ್ಕೃತಿ ಏಕೆ? ಎಂದು ಸಾರ್ವಜನಿಕ ವಲಯ ಪ್ರಶ್ನಿಸಿದೆ. ಇದನ್ನೂ ಓದಿರಿ ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?
ಈ ಕುರಿತು ರಾಮನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಈ ಸರ್ಕಾರದಲ್ಲಿ ಏನು ಬೇಕಾದರೂ ನಡೆಯುತ್ತದೆ ಎಂದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ