ನ್ಯೂಸ್

ಮಾಜಿ ಮಾಡೆಲ್ ದಿವ್ಯಾ ಪಹುಜಾ ಗುಂಡಿಕ್ಕಿ ಹತ್ಯೆ: ಹನಿಟ್ರ್ಯಾಪ್​ ಮೂಲಕ ಗ್ಯಾಂಗ​ಸ್ಟರ್​ ಹತ್ಯೆಗೈದ ಪಾತಕಿ

ನವದೆಹಲಿ: ಮುಂಬೈನಲ್ಲಿ ನಡೆದ ನಕಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ತನ್ನ ಗೆಳೆಯ, ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಹತ್ಯೆಯ ಆರೋಪಿಗಳಲ್ಲಿ ಒಬ್ಬಳಾದ ಮಾಜಿ ಮಾಡೆಲ್ ದಿವ್ಯಾ ಪಹುಜಾಳನ್ನು ಗುರುಗ್ರಾಮ್ ಹೋಟೆಲ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಲಾಗಿದೆ. ಈಕೆಗೆ ಜಾಮೀನು ನೀಡಿದ ತಿಂಗಳ ನಂತರ ಈ ಘಟನೆ ನಡೆದಿದೆ.

ಮಂಗಳವಾರ ರಾತ್ರಿ ಐದು ಮಂದಿ ಹೋಟೆಲ್‌ಗೆ ಕರೆದೊಯ್ದು ಆಕೆಯ ತಲೆಗೆ ಗುಂಡು ಹಾರಿಸಿದ್ದಾರೆ.

ಎಸೆಯಲು ಆಕೆಯ ಶವವನ್ನು ಹೋಟೆಲ್‌ನಿಂದ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಮೂವರು ಆರೋಪಿಗಳನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ.

ಪಹುಜಾ ಹತ್ಯೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಭೂಪೇಂದರ್ ಸಿಂಗ್ ಸಾಂಗ್ವಾನ್ ತಿಳಿಸಿದ್ದಾರೆ.

ದಿವ್ಯಾ ಪಹುಜಾ ಯಾರು?:

ಫೆಬ್ರವರಿ 7, 2016 ರಂದು ಮುಂಬೈ ಹೋಟೆಲ್‌ನಲ್ಲಿ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಹತ್ಯೆಗೆ ಸಂಬಂಧಿಸಿದಂತೆ ಏಳು ವರ್ಷಗಳ ನಂತರ ಪಹುಜಾ ಅವರನ್ನು ಬಂಧಿಸಲಾಗಿತ್ತು.ಕಳೆದ ವರ್ಷ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್ ಈಕೆಗೆ ಜಾಮೀನು ನೀಡಿತ್ತು.

ಗ್ಯಾಂಗ್‌ಸ್ಟರ್ ಹತ್ಯೆಯಲ್ಲಿ ಭಾಗಿಯಾಗಿದ್ದ ಪಹುಜಾ, ಆಕೆಯ ತಾಯಿ ಮತ್ತು ಐವರು ಪೊಲೀಸರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.

ಮುಂಬೈ ಪೊಲೀಸರ ಪ್ರಕಾರ, ಗಡೋಲಿಯನ್ನು ಆತನ "ಗೆಳತಿ" ಪಹುಜಾ ಸಹಾಯದಿಂದ ಬಲೆಗೆ ಬೀಳಿಸಿದ ನಂತರ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು.

ಪ್ರತಿಸ್ಪರ್ಧಿ ಗ್ಯಾಂಗ್​ನ ವೀರೇಂದ್ರ ಕುಮಾರ್ ಅಲಿಯಾಸ್ ಬಿಂದರ್ ಗುಜ್ಜರ್ ಎಂಬಾತ ಗಡೋಲಿ ಹತ್ಯೆಗೈಯಲು ಹರಿಯಾಣ ಪೊಲೀಸ್ ಅಧಿಕಾರಿಗಳೊಂದಿಗೆ ಸಂಚು ರೂಪಿಸಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮುಂಬೈ ಪೊಲೀಸರ ಪ್ರಕಾರ, ಎನ್‌ಕೌಂಟರ್‌ನ ಸಮಯದಲ್ಲಿ ಗುಜ್ಜರ್ ಜೈಲಿನಲ್ಲಿದ್ದನು, ಆದರೆ, ಅವನ ಸಹೋದರ ಮನೋಜ್ ಸಹಾಯದಿಂದ ಸಂಚು ರೂಪಿಸಿದ್ದನು. ಇದಕ್ಕಾಗಿ, ಪಹುಜಾಳನ್ನು ಹನಿ ಟ್ರ್ಯಾಪ್‌ನಂತೆ ಬಳಸಿದ್ದ.