More

    ಇರಾನ್ ಜನರಲ್ ಸುಲೇಮಾನಿ ಸಮಾಧಿ ಬಳಿ ಅವಳಿ ಸ್ಫೋಟ: 100 ಕ್ಕೂ ಹೆಚ್ಚು ಸಾವು

    ದುಬೈ: 2020 ರಲ್ಲಿ ಅಮೆರಿಕದ ಡ್ರೋನ್‌ನಿಂದ ಕೊಲ್ಲಲ್ಪಟ್ಟ ಟಾಪ್ ಕಮಾಂಡರ್ ಖಾಸೆಮ್ ಸುಲೇಮಾನಿ ಸ್ಮರಣಾರ್ಥ ಇರಾನ್‌ನಲ್ಲಿ ನಡೆದ ಸಮಾರಂಭದಲ್ಲಿ ‘ಭಯೋತ್ಪಾದಕ ದಾಳಿ’ಯಿಂದ ಉಂಟಾದ ಎರಡು ಸ್ಫೋಟಗಳಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

    ಆಗ್ನೇಯ ನಗರವಾದ ಕೆರ್ಮನ್‌ನಲ್ಲಿ ಸುಲೇಮಾನಿ ಅವರನ್ನು ಸಮಾಧಿ ಮಾಡಿರುವ ಸ್ಮಶಾನದಲ್ಲಿ ವಾರ್ಷಿಕೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಈ ಎರಡು ಸ್ಫೋಟಗಳು ನಡೆದಿವೆ.

    “ಕೆರ್ಮನ್‌ನ ಹುತಾತ್ಮರ ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಎರಡು ಸ್ಫೋಟಕ ಸಾಧನಗಳನ್ನು ಭಯೋತ್ಪಾದಕರು ದೂರದಿಂದಲೇ ಸ್ಫೋಟಿಸಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    73 ಜನರು ಸಾವನ್ನಪ್ಪಿದ್ದಾರೆ ಮತ್ತು 170 ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ತುರ್ತು ಸೇವೆಗಳ ವಕ್ತಾರ ಬಾಬಕ್ ಯೆಕ್ತಪರಸ್ಟ್ ಹೇಳಿದ್ದಾರೆ. ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ದೂರದರ್ಶನ ನಂತರ ವರದಿ ಮಾಡಿದೆ. ದಾಳಿಯ ಹೊಣೆಯನ್ನು ಯಾವುದೇ ಗುಂಪು ಇದುವರೆಗೂ ಹೊತ್ತುಕೊಂಡಿಲ್ಲ.

    “ಎಲ್ಲಾ ಭದ್ರತೆ ಮತ್ತು ಸುರಕ್ಷತಾ ಕ್ರಮಗಳ ಹೊರತಾಗಿಯೂ ಅಲ್ಲಿ ಭಯಾನಕ ಶಬ್ದ ಕೇಳಿಸಿತು. ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆ” ಎಂದು ಕರ್ಮನ್ ರೆಡ್ ಕ್ರೆಸೆಂಟ್ ಸೊಸೈಟಿಯ ಮುಖ್ಯಸ್ಥ ರೆಜಾ ಫಲ್ಲಾಹ್ ಅವರು ಸರ್ಕಾರಿ ದೂರದರ್ಶನಕ್ಕೆ ತಿಳಿಸಿದರು.

    ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿಯಲ್ಲಿ ಅಮೆರಿಕವು ಸೊಲೈಮಾನಿ ಅವರನ್ನು ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್​ ದೇಶವು ಅಮೆರಿಕದ ಪಡೆಗಳಿರುವ ಎರಡು ಇರಾಕ್ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿತ್ತು. ಈ ಮೂಲಕ ಅಮೆರಿಕ ಮತ್ತು ಇರಾನ್ ನಡುವೆ 2020ರಲ್ಲಿ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ತಲೆದೋರಿತ್ತು.

    ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಸಾಗರೋತ್ತರ ಅಂಗವಾದ ಎಲೈಟ್ ಕುಡ್ಸ್ ಫೋರ್ಸ್‌ನ ಮುಖ್ಯ ಕಮಾಂಡರ್ ಆಗಿ ಸುಲೇಮಾನಿ ವಿದೇಶಗಳಲ್ಲಿ ರಹಸ್ಯ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರು. ಮಧ್ಯಪ್ರಾಚ್ಯದಿಂದ ಅಮೆರಿಕ ಪಡೆಗಳನ್ನು ಓಡಿಸಲು ಇರಾನ್‌ನ ದೀರ್ಘಾವಧಿಯ ಅಭಿಯಾನದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು ಎನ್ನಲಾಗಿದೆ.

    ಎಸ್‌ಬಿಐ ಸೆಕ್ಯುರಿಟೀಸ್ ಬ್ರೋಕರೇಜ್ ಸಂಸ್ಥೆಯ ಭವಿಷ್ಯ: ಲೋಕಸಭೆ ಚುನಾವಣೆ ನಂತರ ಷೇರು ಮಾರುಕಟ್ಟೆಯಲ್ಲಿ ಏರುಗತಿ

    ಬಿಎಸ್​ಇ, ನಿಫ್ಟಿ ಬೆಂಚ್​ಮಾರ್ಕ್ ಸೂಚ್ಯಂಕ ಕುಸಿತ: ಮಿಡ್​ಕ್ಯಾಪ್​, ಸ್ಮಾಲ್​ಕ್ಯಾಪ್​ ಸೂಚ್ಯಂಕ ಏರುಗತಿ

    ಹೊಸ ವರ್ಷದಲ್ಲೇ ಹೊಡೆಯಿತು ಜಾಕ್​ಪಾಟ್​ ಲಾಟರಿ; ಭಾರತೀಯ ಡ್ರೈವರ್​ಗೆ ದೊರೆತಿದ್ದು ಎಷ್ಟು ಕೋಟಿ ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts