More

    ಎಸ್‌ಬಿಐ ಸೆಕ್ಯುರಿಟೀಸ್ ಬ್ರೋಕರೇಜ್ ಸಂಸ್ಥೆಯ ಭವಿಷ್ಯ: ಲೋಕಸಭೆ ಚುನಾವಣೆ ನಂತರ ಷೇರು ಮಾರುಕಟ್ಟೆಯಲ್ಲಿ ಏರುಗತಿ

    ಮುಂಬೈ: 2024ರಲ್ಲಿ ನಿಫ್ಟಿ ಸೂಚ್ಯಂಕವು 23,500-24,300 ಅಂಕಗಳಿಗೆ ಏರಿಕೆ ಕಾಣಬಹುದಾಗಿದೆ.

    ಹೀಗೆಂದು ಎಸ್‌ಬಿಐ ಸೆಕ್ಯುರಿಟೀಸ್ ಬ್ರೋಕರೇಜ್ ಸಂಸ್ಥೆ ಭವಿಷ್ಯ ನುಡಿದಿದೆ. ಪ್ರಸ್ತುತ ಸೂಚ್ಯಂಕಕ್ಕೆ ಹೋಲಿಸಿದರೆ ಇದು 8.5%-12.15% ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.

    ಕಳೆದ ವರ್ಷಾಂತ್ಯದಲ್ಲಿ ದಾಖಲೆಯ ಏರಿಕೆ ಕಂಡು ನಿಫ್ಟಿಯ ಹೊಸ ವರ್ಷದ ಆರಂಭದಲ್ಲಿ ಅಲ್ಪ ಕುಸಿತ ಕಂಡಿದೆ. ಲೋಕಸಭೆ ಚುನಾವಣೆ ನಂತರ ನಿಫ್ಟಿಯು ತನ್ನ ಮೇಲ್ಮುಖ ಪ್ರಯಾಣ ಮುಂದುವರಿಸುವ ಸಾಧ್ಯತೆಯಿದೆ ಎಂದು ಬ್ರೋಕರೇಜ್ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

    ಎಚ್​ಸಿಎಲ್​ ಟೆಕ್ನಾಲಜೀಸ್, ಗೋದ್ರೇಜ್ ಕನ್ಸೂಮರ್ಸ್ ಪ್ರೊಡಕ್ಟ್ಸ್​, ಸಿಐಇ ಆಟೋಮೋಟಿವ್ ಇಂಡಿಯಾ ಮತ್ತು ದಾಲ್ಮಿಯಾ ಭಾರತ್ ಕಂಪನಿಗಳ ಷೇರುಗಳು 2024ರ ಉನ್ನತ ಆಯ್ಕೆಗಳಲ್ಲಿ ಸೇರಿವೆ ಎಂದೂ ವರದಿ ಹೇಳಿದೆ.

    ನಿಫ್ಟಿ ಮಿಡ್-ಕ್ಯಾಪ್ 100 ಸೂಚ್ಯಂಕವು 51,000-53,000ರ ಅಂಕಗಳಿಗೆ ತಲುಪಬಹುದಾಗಿದೆ ಎಂದು ಎಸ್‌ಬಿಐ ಸೆಕ್ಯುರಿಟೀಸ್ ಹೇಳಿದೆ. ಇದು ಪ್ರಸ್ತುತ ಸೂಚ್ಯಂಕಕ್ಕಿಂತ 10% ರಿಂದ 14% ರಷ್ಟು ಏರಿಕೆಯನ್ನು ಸೂಚಿಸುತ್ತದೆ. ಈಗ ನಿಫ್ಟಿ ಮಿಡ್-ಕ್ಯಾಪ್ 100 ಸೂಚ್ಯಂಕವು 46,529.05 ಅಂಕಗಳಿಗೆ ತಲುಪಿದೆ.

    ನಿಫ್ಟಿ ಸ್ಮಾಲ್-ಕ್ಯಾಪ್ 100 ಸೂಚ್ಯಂಕವು 16,500-18,000 ಅಂಕಗಳಿಗೆ ಮುಟ್ಟಬಹುದು ಎಂದೂ ಎಸ್‌ಬಿಐ ಸೆಕ್ಯುರಿಟೀಸ್ ತಿಳಿಸಿದೆ. ಅಂದರೆ, ಶೇಕಡಾ 18.5% ರಷ್ಟು ಹೆಚ್ಚಳವನ್ನು ಇದು ಸೂಚಿಸುತ್ತದೆ. ನಿಫ್ಟಿ ಸ್ಮಾಲ್​ ಕ್ಯಾಪ್​ 100 ಸೂಚ್ಯಂಕ ಈಗ 15188.80 ಅಂಕಗಳಿಗೆ ತಲುಪಿದೆ.

    ನಿಫ್ಟಿ ಐಟಿ, ಫಾರ್ಮಾ, ರಾಸಾಯನಿಕಗಳ ಷೇರುಗಳು, ರೈಲ್ವೆ, ರಿಯಾಲ್ಟಿ, ಸಾರ್ವಜನಿಕ ವಲಯದ ಕಂಪನಿಗಳ ಷೇರುಗಳು. ಮೆಟಲ್ ಸೂಚ್ಯಂಕಗಳು ಕೂಡ ಏರುಗತಿಯಲ್ಲಿ ಸಾಗಲಿವೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.

    ಬಿಎಸ್​ಇ, ನಿಫ್ಟಿ ಬೆಂಚ್​ಮಾರ್ಕ್ ಸೂಚ್ಯಂಕ ಕುಸಿತ: ಮಿಡ್​ಕ್ಯಾಪ್​, ಸ್ಮಾಲ್​ಕ್ಯಾಪ್​ ಸೂಚ್ಯಂಕ ಏರುಗತಿ

    ಹೊಸ ವರ್ಷದಲ್ಲೇ ಹೊಡೆಯಿತು ಜಾಕ್​ಪಾಟ್​ ಲಾಟರಿ; ಭಾರತೀಯ ಡ್ರೈವರ್​ಗೆ ದೊರೆತಿದ್ದು ಎಷ್ಟು ಕೋಟಿ ಗೊತ್ತೆ?

    ಲೋಕಸಭೆ ಚುನಾವಣೆಗಾಗಿ ದಕ್ಷಿಣ ರಾಜ್ಯಗಳತ್ತ ಪ್ರಧಾನಿ ಮೋದಿ ಚಿತ್ತ: ‘ಮಿಷನ್ ಸೌತ್’ ಗುರಿ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts