More

    2024ರಲ್ಲಿ ಯಾವ ಷೇರುಗಳಿಗೆ ಬರಲಿದೆ ಬೇಡಿಕೆ?: ಹೀಗಿದೆ ಪ್ರಮುಖ ಬ್ರೋಕರೇಜ್​ ಸಂಸ್ಥೆಗಳ ಭವಿಷ್ಯ

    ಮುಂಬೈ: 2023 ರಲ್ಲಿ ನಿಫ್ಟಿ 50 ಸೂಚ್ಯಂಕವು ಶೇಕಡಾ 20ರಷ್ಟು ಏರಿಕೆ ಕಾಣುವುದರೊಂದಿಗೆ ಭಾರತೀಯ ಷೇರು ಮಾರುಕಟ್ಟೆಯು ವ್ಯಾಪಕ ಲಾಭದಲ್ಲಿ ಮುನ್ನಡೆಯಿತು. ಈ ಮೂಲಕ ಸತತ ಎಂಟನೇ ವರ್ಷವೂ ಮಾರುಕಟ್ಟೆಯು ಏರಿಕೆಯನ್ನು ದಾಖಲಿಸಿರುವುದು ಗಮನಾರ್ಹವಾಗಿದೆ. ಇದೇ ವರ್ಷದಲ್ಲಿ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 45ರಷ್ಟು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 55ರಷ್ಟು ಏರಿಕೆಯಾಗಿರುವುದು ದಾಖಲೆಯಾಗಿದೆ.

    ಈ ಹಿನ್ನೆಲೆಯಲ್ಲಿ ಹೊಸ ವರ್ಷ 2024ರಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏನಾಗಲಿದೆ ಎಂಬ ಮುನ್ಸೂಚನೆಯನ್ನು ಸಿಟಿ, ಬರ್ನ್‌ಸ್ಟೈನ್ ಮತ್ತು ಜೆಫರೀಸ್‌ನಂತಹ ಬ್ರೋಕರೇಜ್‌ ಸಂಸ್ಥೆಗಳು ನೀಡಿವೆ.
    ಈಗಾಗಲೇ ಮಿಡ್ ಮತ್ತು ಸ್ಮಾಲ್ ಕ್ಯಾಪ್‌ಗಳಲ್ಲಿ ಸಾಕಷ್ಟು ಹೆಚ್ಚಳ ಕಂಡುಬಂದಿರುವುದರಿಂದ ಲಾರ್ಜ್​ ಕ್ಯಾಪ್ ಸ್ಟಾಕ್‌ಗಳಲ್ಲಿ (ಬೃಹತ್ ಕಂಪನಿಗಳ ಷೇರುಗಳಲ್ಲಿ) ಏರುಗತಿಯು 2024ರಲ್ಲಿ ಕಂಡುಬರಲಿದೆ ಎಂದು ಈ ಬ್ರೋಕರೇಜ್​ ಸಂಸ್ಥೆಗಳು ಅಂದಾಜಿಸಿವೆ.

    ಜೆಫರೀಸ್​:

    ಭಾರತದಲ್ಲಿ ವಿದೇಶಿ ಹೂಡಿಕೆದಾರರ ಸ್ಥಾನವು ಅಲ್ಪ ಪ್ರಮಾಣದಲ್ಲಿದೆ. 2024 ಹೆಚ್ಚಿನ ವಿದೇಶ ಹೂಡಿಕೆದಾರರು ಒಳಹರಿವು ಹೆಚ್ಚಾಗಲಿದ್ದು, ಇದರಿಂದಾಗಿ ಬ್ಯಾಂಕಿಂಗ್ ಷೇರುಗಳಿಗೆ ನೆರವಾಗುತ್ತದೆ ಎಂದು ಜೆಫರೀಸ್ ಹೇಳಿದೆ.

    ಇಂಧನ, ಟೆಲಿಕಾಂ, ಕೈಗಾರಿಕೆಗಳು ಮತ್ತು ರಿಯಲ್ ಎಸ್ಟೇಟ್‌ ವಲಯಗಳಲ್ಲಿ ಹೂಡಿಕೆಗೆ ನೂತನ ವರ್ಷದಲ್ಲಿ ಜೆಫರೀಸ್ ಆದ್ಯತೆ ನೀಡಿದೆ. ಐಟಿ, ಗ್ರಾಹಕ ಮತ್ತು ಇಂಧನ ವಲಯಗಳಿಗೆ ಇದು ಆದ್ಯತೆ ನೀಡಿಲ್ಲ. ಲಾರ್ಸೆನ್ ಆ್ಯಂಡ್​ ಟೂಬ್ರೊ ಮತ್ತು ಅದಾನಿ ಪೋರ್ಟ್‌ಗಳಿಗೆ ಕಡಿಮೆ ಮಹತ್ವ ನೀಡಿದೆ.

    ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಮ್ಯಾಕ್ರೋಟೆಕ್ ಡೆವಲಪರ್‌ಗಳು, ಗೋದ್ರೇಜ್ ಪ್ರಾಪರ್ಟೀಸ್, ಕೋಲ್ ಇಂಡಿಯಾ, ಜೆಎಸ್‌ಡಬ್ಲ್ಯೂ ಎನರ್ಜಿ, ಟಿವಿಎಸ್ ಮೋಟಾರ್, ಐಷರ್ ಮೋಟಾರ್ಸ್, ಭಾರ್ತಿ ಏರ್‌ಟೆಲ್, ಅದಾನಿ ಪೋರ್ಟ್ಸ್, ಕಜಾರಿಯಾ ಸೆರಾಮಿಕ್ಸ್ ಮೊದಲಾದ ಲಾರ್ಜ್​ ಕ್ಯಾಪ್​ಗಳಿಗೆ ಮಹತ್ವದ ಸ್ಥಾನವನ್ನು ಇದು ನೀಡಿದೆ.

    ಬರ್ನ್‌ಸ್ಟೈನ್:

    ಬರ್ನ್‌ಸ್ಟೈನ್ ಬ್ರೋಕರೇಜ್ ಸಂಸ್ಥೆಯು ಸಣ್ಣ ಮತ್ತು ಮಿಡ್‌ಕ್ಯಾಪ್ ಷೇರುಗಳಿಗೆ ಕಡಿಮೆ ಆದ್ಯತೆ ನೀಡಿದೆ. ಐಟಿ ಸೇವೆ, ಟೆಲಿಕಾಂ ವಲಯಕ್ಕೆ ಹೆಚ್ಚಿನ ತೂಕವನ್ನು ನೀಡಿದೆ. ಲೋಹ ವಲಯಕ್ಕೆ ಸಮಾನ ಮಹತ್ವ ನೀಡಿದೆ. ರಿಯಲ್ ಎಸ್ಟೇಟ್ ಮತ್ತು ಸಿಮೆಂಟ್ ವಲಯಗಳಿಗೆ ಕಡಿಮೆ ಆದ್ಯತೆ ನೀಡಿದೆ.

    ಸಿಟಿ:

    ಸಿಟಿ ಬ್ರೋಕರೇಜ್ ಸಂಸ್ಥೆ ಪ್ರಕಾರ, ಬಲವಾದ ದೇಶೀಯ ಹೂಡಿಕೆಯ ಒಳಹರಿವಿನಿಂದಾಗಿ ಮಿಡ್‌ಕ್ಯಾಪ್ ಕಾರ್ಯಕ್ಷಮತೆ ಮುಂದುವರಿಯುವ ಸಾಧ್ಯತೆಯಿದೆ. ಇದರ ಹೊರತಾಗಿಯೂ, ಲಾರ್ಜ್​ ಕ್ಯಾಪ್ ಕಂಪನಿಗಳಲ್ಲಿ ಉತ್ತಮ ಅಪಾಯ-ಪ್ರತಿಫಲ ಸಾಧ್ಯತೆಯನ್ನು ಇದು ಅಂದಾಜಿಸಿದೆ..

    ಪಿಎಸ್‌ಯು ಯುಟಿಲಿಟೀಸ್, ಡಿಫೆನ್ಸ್, ಇಂಡಸ್ಟ್ರಿಯಲ್ಸ್, ಬ್ಯಾಂಕ್‌ಗಳು ಮತ್ತು ಇನ್ಶೂರೆನ್ಸ್‌ ವಲಯಕ್ಕೆ ಹೆಚ್ಚಿನ ತೂಕವನ್ನು ಸಿಟಿ ನೀಡಿದೆ. ಲೋಹ ಮತ್ತು ಐಟಿಯಂತಹ ವಲಯಗಳಲ್ಲಿ ಕಡಿಮೆ ಆದ್ಯತೆ ನೀಡಿದೆ. ಎಚ್​ಡಿಎಫ್​ಸಿ ಬ್ಯಾಂಕ್, ಸಿಪ್ಲಾ, ದೇವಯಾನಿ ಇಂಟರ್ನ್ಯಾಷನಲ್, ಇಂಡಸ್ ಟವರ್ಸ್ ಮತ್ತು ಎಂಡ್ಯೂರೆನ್ಸ್ ಟೆಕ್ನಾಲಜೀಸ್ ಷೇರುಗಳ ಆಯ್ಕೆಗೆ ಈ ಬ್ರೋಕರೇಜ್​ ಸಂಸ್ಥೆ ಸಲಹೆ ನೀಡಿದೆ.

    ಎಸ್‌ಬಿಐ ಸೆಕ್ಯುರಿಟೀಸ್ ಬ್ರೋಕರೇಜ್ ಸಂಸ್ಥೆಯ ಭವಿಷ್ಯ: ಲೋಕಸಭೆ ಚುನಾವಣೆ ನಂತರ ಷೇರು ಮಾರುಕಟ್ಟೆಯಲ್ಲಿ ಏರುಗತಿ

    ಬಿಎಸ್​ಇ, ನಿಫ್ಟಿ ಬೆಂಚ್​ಮಾರ್ಕ್ ಸೂಚ್ಯಂಕ ಕುಸಿತ: ಮಿಡ್​ಕ್ಯಾಪ್​, ಸ್ಮಾಲ್​ಕ್ಯಾಪ್​ ಸೂಚ್ಯಂಕ ಏರುಗತಿ

    ಹೊಸ ವರ್ಷದಲ್ಲೇ ಹೊಡೆಯಿತು ಜಾಕ್​ಪಾಟ್​ ಲಾಟರಿ; ಭಾರತೀಯ ಡ್ರೈವರ್​ಗೆ ದೊರೆತಿದ್ದು ಎಷ್ಟು ಕೋಟಿ ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts