ನ್ಯೂಸ್

ಶತ್ರುಗಳ ಎದೆಯಲ್ಲಿ ಶುರುವಾಯ್ತು ನಡುಕ; ಫ್ರಾನ್ಸ್​ನಿಂದ ಟೇಕ್​ಆಫ್​ ಆಯ್ತು ರಫೇಲ್​...!

ನವದೆಹಲಿ: ವರ್ಷದಿಂದ ದಕ್ಷಿಣ ಫ್ರಾನ್ಸ್​ನ ಬಾರ್ಬಡೋಕ್ಸ್​ನಲ್ಲಿರುವ ಮೇರಿಗ್ನಾಕ್​ ವಾಯುನೆಲೆಯಿಂದ ಐದು ರಫೇಲ್​ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲು ಟೇಕ್​ಆಫ್​ ಆಗಿವೆ. ಬುಧವಾರ ಹರಿಯಾಣದ ಅಂಬಾಲಾ ವಾಯುನೆಲೆಗೆ ಆಗಮಿಸಲಿವೆ.

ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಫ್ರೆಂಚ್​ ಡಸಾಲ್ಟ್​ ಏವಿಯೇಷನ್​ ಒಟ್ಟು 36 ಯುದ್ಧ ವಿಮಾನಗಳನ್ನು ಪೂರೈಸಲಿದೆ. ಮೊದಲ ಕಂತಿನಲ್ಲಿ ಐದು ಯುದ್ಧವಿಮಾನಗಳನ್ನು ಹಸ್ತಾಂತರಿಸಿದೆ.

ಜತೆಗೆ, ಭಾರತಿಯ ವಾಯು ಸೇನೆಯ 12 ಪೈಲಟ್​ ಹಾಗೂ ಇಂಜಿನಿಯರಿಂಗ್​ ಸಿಬ್ಬಂದಿಗೆ ಪೂರ್ಣ ಪ್ರಮಾಣದ ತರಬೇತಿಯನ್ನು ಫ್ರಾನ್ಸ್​ ಈಗಾಗಲೇ ನೀಡಿದೆ.

ಆಗಸದಲ್ಲಿಯೇ ಇಂಧನ ಭರ್ತಿ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ಯುದ್ಧ ವಿಮಾನಗಳು ಯುಎಇಯಲ್ಲಿರುವ ಫ್ರಾನ್ಸ್​ನ ವಾಯುನೆಲೆಯಲ್ಲಿ ನಿಲುಗಡೆಯಾಗಲಿವೆ. ಬಳಿಕ ಬುಧವಾರ ಭಾರತಕ್ಕೆ ಆಗಮಿಸಲಿವೆ ಎಂದು ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ಹತ್ತು ಯುದ್ಧ ವಿಮಾನಗಳ ಹಸ್ತಾಂತರ ಕಾರ್ಯಕ್ರಮ ಪೂರ್ಣಗೊಂಡಂತಾಗಿದೆ. ಐದು ಯುದ್ಧ ವಿಮಾನಗಳು ತರಬೇತಿ ಉದ್ದೇಶಗಳಿಗಾಗಿ ಫ್ರಾನ್ಸ್​ನಲ್ಲಿಯೇ ಇರಲಿವೆ. 2021ರ ಕೊನೆಗೆ ಎಲ್ಲ 36 ಯುದ್ಧ ವಿಮಾನಗಳನ್ನು ಹಸ್ತಾಂತರಿಸಲಾಗುವುದು ಎಂದು ಡಸಾಲ್ಟ್​ ತಿಳಿಸಿದೆ.

ಫ್ರಾನ್ಸ್​ನಲ್ಲಿರುವ ಭಾರತೀಯ ರಾಯಭಾರಿ ಜಾವೇದ್​ ಅಶ್ರಫ್​ ವಿಮಾನಗಳ ಟೇಕ್​ ಆಫ್​ಗೂ ಮುನ್ನ ಭಾರತೀಯ ಪೈಲಟ್​ಗಳ ಜತೆಗೆ ಮಾತುಕತೆ ನಡೆಸಿದರು.

ಫ್ರಾನ್ಸ್​ನ ವಾಯುನೆಲೆಯಿಂದ ತೆರಳುತ್ತಿರುವ ರಫೇಲ್​ ಯುದ್ಧ ವಿಮಾನಗಳ ವಿಡಿಯೋ...