ನವದೆಹಲಿ: ಇಂದು ಅಂತಾರಾಷ್ಟ್ರೀಯ ಸಂತೋಷ ದಿನ. ಇದೇ ಸಂದರ್ಭದಲ್ಲಿ 'ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್' ಪ್ರಕಟಗೊಂಡಿದ್ದು, ಜಗತ್ತಿನ ಅತ್ಯಂತ ಸಂತೋಷಭರಿತ ದೇಶ ಯಾವುದು ಎಂಬುದು ಕೂಡ ಘೋಷಣೆಯಾಗಿದೆ. ವಿಶೇಷವೆಂದರೆ ಈ ವಿಷಯದಲ್ಲಿ ಒಂದು ದೇಶ ಆರು ವರ್ಷಗಳಿಂದಲೂ ಮೊದಲ ಸ್ಥಾನವನ್ನು ಕಾದುಕೊಂಡಿದೆ.
ಯುನೈಟೆಡ್ ನೇಷನ್ಸ್ ಸಸ್ಟೈನೇಬಲ್ ಡೆವೆಲಪ್ಮೆಂಟ್ ಸಲ್ಯೂಷನ್ಸ್ ನೆಟ್ವರ್ಕ್ ಪ್ರಕಟಿಸಿರುವ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ ಪ್ರಕಾರ, ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷಭರಿತ ದೇಶ. ವಿಶೇಷವೆಂದರೆ ಸತತ ಆರನೇ ವರ್ಷವೂ ಈ ದೇಶ ಇದರಲ್ಲಿ ಪ್ರಥಮ ಸ್ಥಾನ ಪಡೆದಿದೆ. ಎರಡು ಮತ್ತು ಮೂರನೇ ಸ್ಥಾನ ಕ್ರಮವಾಗಿ ಡೆನ್ಮಾರ್ಕ್ ಮತ್ತು ಐಲೆಂಡ್ ಪಡೆದುಕೊಂಡಿದೆ.
ದೇಶದ ಆದಾಯ, ಜನರ ಆರೋಗ್ಯ, ಜನರ ಸ್ಪಂದನೆ, ಜನರು ಜೀವನದ ಕುರಿತ ನಿರ್ಣಯ ತೆಗೆದುಕೊಳ್ಳುವಲ್ಲಿನ ಸ್ವಾತಂತ್ರ್ಯ, ಜನತೆಯ ಔದಾರ್ಯ ಮತ್ತು ಭ್ರಷ್ಟಾಚಾರರಹಿತ ವಾತಾವರಣ ಮುಂತಾದವುಗಳ ಪ್ರಮುಖವಾಗಿ ಪರಿಗಣಿಸಿ ಈ ಸ್ಥಾನವನ್ನು ನೀಡಲಾಗಿದೆ ಎಂದು ವರದಿಯು ಹೇಳಿದೆ. ಲೆಬನಾನ್ ಮತ್ತು ಅಫ್ಘಾನಿಸ್ತಾನ ಈ ಪಟ್ಟಿಯಲ್ಲಿ ಕೊನೆಯ ಸ್ಥಾನಗಳಲ್ಲಿವೆ. -ಏಜೆನ್ಸೀಸ್