ಇಡೀ ಮುಂಬೈ ಕರೊನಾದಿಂದಾಗಿ ಸ್ಮಶಾನದಂತಾಗಿದೆ. ಜನರೆಲ್ಲರೂ ಗೂಡು ಸೇರಿದ್ದಾರೆ. ಒಂದಷ್ಟು ಸಡಿಲಿಕೆ ಇದ್ದರೂ, ಅವಶ್ಯಕತೆ ಇದ್ದವರು ಆಚೆ ಬರುತ್ತಿದ್ದಾರೆ. ಸಿನಿಮಾದವರಂತೂ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಿಟಿಯಲ್ಲಿ ಓಡಾಟ ನಡೆಸುವುದಂತೂ ದೂರದ ಮಾತು. ಹೀಗಿರುವಾಗಲೇ ಸಲ್ಮಾನ್ ಖಾನ್ ಒಡೆತನದ ಪಾನ್ವೆಲ್ ಫಾರ್ಮ್ಹೌಸ್ನಲ್ಲಿ ಕಳೆದ ಹಲವು ದಿನಗಳಿಂದ ಜಾಕ್ಲೀನ್ ಫರ್ನಾಂಡೀಸ್ ಮತ್ತು ಲೂಲಿಯಾ ವೆಂಚರ್ ಠಿಕಾಣಿ ಹೂಡಿದ್ದಾರೆ!
ಹೌದು, ಲಾಕ್ಡೌನ್ ಶುರುವಾಗಿ 50 ದಿನಗಳಾಗುತ್ತ ಬಂದಿದೆ. ಇಡೀ ದೇಶವೇ ಲಾಕ್ ಆಗಿದೆ. ಅದರಲ್ಲೂ ಮಹಾರಾಷ್ಟ್ರದ ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಿರುವಾಗಲೇ ಅದ್ಯಾವ ಗ್ಯಾಪ್ನಲ್ಲಿ ಜಾಕ್ಲೀನ್ ಫಾರ್ಮ್ಹೌಸ್ ಸೇರಿಕೊಂಡರೋ ಗೊತ್ತಿಲ್ಲ. ಜಿಮ್ನಲ್ಲೂ ಅವರೇ, ಉಪಹಾರದ ಹೊತ್ತಲ್ಲೂ ಅವರೇ, ಇದೀಗ ಅದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತೇರೆ ಬಿನ್ ಎಂಬ ಹಾಡನ್ನೇ ಚಿತ್ರೀಕರಿಸಿದ್ದಾರೆ.
ಕೇವಲ ಜಾಕ್ಲೀನ್ ಅಷ್ಟೇ ಸಲ್ಮಾನ್ ಜತೆಗಿಲ್ಲ. ಬದಲಿಗೆ ಈ ಹಿಂದೆ ಸಲ್ಮಾನ್ ಪ್ರೇಯಸಿ ಎಂದೇ ಹೇಳಲಾಗುತ್ತಿದ್ದ, ಲೂಲಿಯಾ ವೆಂಚರ್ ಸಹ ಫಾರ್ಮ್ಹೌಸ್ನಲ್ಲಿ ತಂಗಿದ್ದಾರೆ. ಅಲ್ಲಿನ ಕುದುರೆಗಳ ಮೇಲೆ ಸವಾರಿ ಮಾಡಿದ್ದಾರೆ. ಕುರಿಮರಿಗಳ ಜತೆ ಆಟವಾಡಿದ್ದಾರೆ. ಕೆರೆಯಲ್ಲಿ ಮೀನು ಹಿಡಿದು ತಿಂದಿದ್ದಾರೆ. ಒಟ್ಟಿನಲ್ಲಿ ಲಾಕ್ಡೌನ್ ಸಮಯವನ್ನು ಒಮದು ರೀತಿ ಜಾಲಿ ಟ್ರಿಪ್ ಎಂಬಂತೆ ಅನುಭವಿಸುತ್ತಿದ್ದಾರೆ ಜಾಕ್ಲೀನ್ ಮತ್ತು ಲೂಲಿಯಾ. ಇವರ ಜತೆಗೆ ಬಿಗ್ಬಾಸ್ ಸ್ಪರ್ಧಿ ನಿಕೇತನ್ ಸೇರಿ ಹಲವರು ಸಲ್ಮಾನ್ ಖಾನ್ ಫಾರ್ಮ್ಹೌಸ್ ಸೇರಿದ್ದಾರೆ. (ಏಜೆನ್ಸೀಸ್)