ನ್ಯೂಸ್

ಈತನಿಗಾಗಿ 22ನೇ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡೆ; ಸ್ಟಾರ್​ ನಟನೊಂದಿಗಿನ ಸಂಬಂಧದ ಕುರಿತು ಮೌನ ಮುರಿದ ನಟಿ

ಮುಂಬೈ: ಫಿಟ್​ನೆಸ್​ ಹಾಗೂ ತಮ್ಮ ನಟನೆಯಿಂದಲೇ ಹೆಸರುವಾಸಿಯಾಗಿರುವ ನಟಿಯರ ಪೈಕಿ ಮೊದಲಿಗೆ ಕೇಳಿ ಬರುವ ಹೆಸರು ಎಂದರೆ ಅದು ಶಿಲ್ಪಾ ಶೆಟ್ಟಿ ಅವರದ್ದು, ಸ್ಯಾಂಡಲ್​ವುಡ್​, ಬಾಲಿವುಡ್​ ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿರುವ ನಟಿ ಶಿಲ್ಪಾ ಶೆಟ್ಟಿ ಈಗ ವಿಚಾರ ಒಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನಲ್ಲಿ ಕನ್ಯತವನ್ನು ಕಳೆದುಕೊಂಡಿದ್ದರು ಎಂದು ಈ ಹಿಂದೆ ಸುದ್ದಿಯಾಗಿತ್ತು. ಅಲ್ಲದೇ ಬಾಲಿವುಡ್​ ಸ್ಟಾರ್​ ನಟ ಅಕ್ಷಯ್​ ಕುಮಾರ್​ ಅವರೊಂದಿಗೆ ಮಲಗಿದ್ದೆ ಎಂದು ಸೆನ್ಸೇಷನಲ್ ಕಾಮೆಂಟ್‌ ಮಾಡಿದ್ದರು. ಇದೀಗ ಈ ಸುದ್ದಿ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಚಿತ್ರರಂಗ ಪ್ರವೇಶಿಸುವ ಮುನ್ನ ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನವರೆಗೂ ಕಿಸ್ ಮಾಡಿರಲಿಲ್ಲ. ಆದರೆ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಗೆ ಕಿಸ್​ ಮಾಡಲಾಗಿದೆ ಎಂಬ ಸುದ್ದಿ ಇತ್ತು. ಈ ಸುಂದರಿಯೊಂದಿಗೆ ಡೇಟ್ ಮಾಡಿದ ಮೊದಲ ನಟ ಅಕ್ಷಯ್ ಕುಮಾರ್. ಅಲ್ಲಿಯವರೆಗೆ ನಟಿ ಯಾರೊಂದಿಗೂ ಡೇಟ್ ಮಾಡಿರಲಿಲ್ಲವಂತೆ. ಈತನಿಗೆ ತಾನು ಕನ್ಯತ್ವ ಕಳೆದುಕೊಂಡೆ ಎಂದು ನಟಿ ಪರೋಕ್ಷವಾಗಿ ಕಾರ್ಯಕ್ರಮ ಒಂದರಲ್ಲಿ ಬಹಿರಂಗಪಡಿಸಿದ್ದರು.

ಆರಂಭದ ದಿನಗಳಲ್ಲಿ ಶಿಲ್ಪಾ ಶೆಟ್ಟಿ ಅಕ್ಷಯ್ ಜೊತೆ ಸಂಬಂಧ ಹೊಂದಿದ್ದರು. ಇದಕ್ಕಿಂತ ಮೊದಲು ನಟಿ ಯಾವುದೇ ನಟನೊಂದಿಗೆ ಡೇಟಿಂಗ್ ಮಾಡಿರಲಿಲ್ಲ. ಆ ಸಮಯದಲ್ಲಿ ಅವರಿಬ್ಬರ ಡೇಟಿಂಗ್ ಸುದ್ದಿ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿತ್ತು. ಆದರೆ, ಇಬ್ಬರೂ ತಮ್ಮ ಸಂಬಂಧವನ್ನು ಖಚಿತಪಡಿಸಿರಲಿಲ್ಲ.

22 ನೇ ವಯಸ್ಸಿನಲ್ಲಿ ಅಮೆರಿಕನ್ ಶೋ ಬಿಗ್ ಬ್ರದರ್‌ನಲ್ಲಿ ಭಾಗವಹಿಸಿದಾಗ ಮದುವೆಗೆ ಮೊದಲು ತನ್ನ ಕನ್ಯತ್ವವನ್ನು ಕಳೆದುಕೊಂಡಿರುವುದನ್ನು ಖಚಿತಪಡಿಸಿದ್ದರು. ಸಹ-ಸ್ಪರ್ಧಿಯೊಬ್ಬರು ಶಿಲ್ಪಾ ಶೆಟ್ಟಿ ಕನ್ಯತ್ವವನ್ನು ಕಳೆದುಕೊಂಡಿರುವ ವಯಸ್ಸಿನ ಬಗ್ಗೆ ಕೇಳಿದರು. ನಟಿ ಮುಗುಳ್ನಕ್ಕು ಅದು ಬಾಲಿವುಡ್‌ನ ಖಿಲಾಡಿ ಕುಮಾರ್, ಅಕ್ಷಯ್ ಕುಮಾರ್ ಅವರೊಂದಿಗಿನ ಲವ್​​ಗಾಗಿ ಸುದ್ದಿ ಮಾಡುತ್ತಿದ್ದ ವಯಸ್ಸು ಎಂದು ಸೂಚ್ಯವಾಗಿ ಹೇಳಿದ್ದರು.