ದೆಹಲಿ: ಮೊಟೊರೊಲಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ಸ್ಮಾರ್ಟ್ಫೋನ್ನ್ನು ಬಿಡುಗಡೆ ಮಾಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ನೆಲೆಯೂರಿರುವ ಕೆಲವು ಸ್ಮಾರ್ಟ್‌ಫೋನ್ ಕಂಪನಿಗೆ ಟಕ್ಕರ್ ಕೊಡಲು ಮುಂದಾಗಿದೆ. ಪ್ರಮುಖವಾಗಿ ಮಧ್ಯಮ ವರ್ಗದವರಿಗಾಗಿಯೇ ಬಜೆಟ್ ಪೋನ್ ಬಿಡುಗಡೆ ಮಾಡುತ್ತಿರುವ ಮೊಟೊ ಕಂಪನಿಯು ಕೈಗೆಟುಕುವ ದರದಲ್ಲಿ ಹೊಸ ಹೊಸ ಮೊಬೈಲ್ಗಳನ್ನು ಮಾರುಕಟ್ಟೆಗೆ ತರುತ್ತಿದೆ.
ಇತ್ತೀಚಿಗೆ ಮೊಟೊ G14 ಸ್ಮಾರ್ಟ್ಫೋನ್ನ್ನು ಬಿಡುಗಡೆ ಮಾಡಿರುವ ಕಂಪನಿಯು, ಹಲವಾರ ವೈಶಿಷ್ಟ್ಯಗಳೊಂದಿಗೆ ಬಳಕೆದಾರರನ್ನು ಆಕರ್ಷಿಸಲು ಮುಂದಾಗಿದೆ. ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಒಂದೇ ಮಾದರಿಯಲ್ಲಿ ಲಭ್ಯವಿದ್ದು, 4GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 9,999 ರೂ ಆಸುಪಾಸಿನಲ್ಲಿದೆ. ಇದು ಸ್ಟೀಲ್ ಗ್ರೇ ಮತ್ತು ಸ್ಕೈ ಬ್ಲೂ ಬಣ್ಣದ ಎರಡು ರೂಪಾಂತರಗಳಲ್ಲಿ ಗ್ರಾಹಕರಿಕಗೆ ಲಭ್ಯವಿದ್ದು, 6.5 ಇಂಚಿನ ಪೂರ್ಣ HD+ ಡಿಸ್ಪ್ಲೇ ಹೊಂದಿದೆ.
ಇದನ್ನೂ ಓದಿ: ಪಾಲಕರ ಹತ್ಯೆಗೈದು ಸ್ನಾನ ಮಾಡಿ, ಬಟ್ಟೆ ಬದಲಿಸಿ ಮನೆಯಲ್ಲಿಯೇ ಆರಾಮಾಗಿ ಕುಳಿತಿದ್ದ ಮಗ..!
ಇದು ಆರ್ಮ್ ಮಾಲಿ-ಜಿ57 ಎಂಪಿಐ ಜಿಪಿಯು ಜೊತೆ ಜೋಡಿಸಲಾದ ಯುನಿಸೊಕ್ ಟಿ616 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಸ್ಮಾರ್ಟ್ಫೋನ್ನ ಸಂಗ್ರಹಣಾ ಸಾಮರ್ಥ್ಯವನ್ನು ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ. ಹಿಂಬದಿಯಲ್ಲಿ 50MP ಪ್ರಾಥಮಿಕ ಸಂವೇದಕ ಮತ್ತು 2MP ಮ್ಯಾಕ್ರೋ ಲೆನ್ಸ್ ಒಳಗೊಂಡಿರುವ ಕ್ಯಾಮರಾ ಸೆಟಪ್ನ್ನು ಒಳಗೊಂಡಿದೆ. ಸೆಲ್ಫಿಗಾಗಿ ಮತ್ತು ವೀಡಿಯೊ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮರಾವನ್ನು ಈ ಫೋನ್ ಹೊಂದಿದೆ.
ಇನ್ನು, 5,000 mAh ಬ್ಯಾಟರಿಯನ್ನು ಹೊಂದಿರುವ ಮೊಟೊ G14 ಫೋನ್ 20W ವೇಗದ ಚಾರ್ಜಿಂಗ್ನ್ನು ಬೆಂಬಲಿಸುತ್ತದೆ. ಡಾಲ್ಬಿ ಅಟ್ಮಾಸ್-ಸಕ್ರಿಯಗೊಳಿಸಿದ ಸ್ಟಿರಿಯೊ ಸ್ಪೀಕರ್‌ಗಳು ಸೇರಿದಂತೆ ಕೆಲವು ಗಮನಾರ್ಹ ವೈಶಿಷ್ಟ್ಯಗಳಿವೆ. Moto G14 ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.(ಏಜೆನ್ಸೀಸ್)