ನ್ಯೂಸ್

ಮ್ಯಾನ್ಮಾರ್​ ಮತ್ತು ಥೈಲ್ಯಾಂಡ್​ನಲ್ಲಿ ಭೂಕಂಪನ; ಭಾರತ ಸಹಾಯ ಮಾಡಲು ಸಿದ್ಧ: ಪ್ರಧಾನಿ ಮೋದಿ | Earthquake

Earthquake : ಇಂದು ಮುಂಜಾನೆ ಮ್ಯಾನ್ಮಾರ್​ ಮತ್ತು ಥೈಲ್ಯಾಂಡ್​ ಸಂಭವಿಸಿದ 7.7 ಮತ್ತು 6.4 ತೀವ್ರತೆಯ ಭೀಕರ ಭೂಕಂಪನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ (ಟೀಟ್ವ್​) ಎಕ್ಸ್​ ಖಾತೆ ಹಂಚಿಕೊಂಡಿರುವ ಪ್ರಧಾನಿ, '' ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಭಾರತ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ, ನಮ್ಮ ಅಧಿಕಾರಿಗಳನ್ನು ಸನ್ನದ್ಧವಾಗಿ ಇರಿಸಿಕೊಳ್ಳಲು ಕೇಳಿಕೊಂಡಿದೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರಲು ವಿದೇಶಾಂಗ ಸಚಿವಾಲಯವನ್ನು ಕೇಳಿಕೊಂಡಿದೆ" ಎಂದು ಪ್ರಧಾನಿ ಮೋದಿ ಎಕ್ಸ್​ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಎರಡೆರಡು ಭಾರಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೊದಲ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲೇ ಮತ್ತೊಂದು ಭಾರಿ ಭೂಕಂಪ ಸಂಭವಿಸಿದ ವರದಿಯಾಗಿದೆ. 7.7 ತೀವ್ರತೆಯಲ್ಲಿ ಮೊದಲ ಭೂಕಂಪ ಸಂಭವಿಸಿದ್ದು, 6.4 ತೀವ್ರತೆಯಲ್ಲಿ 2ನೇ ಸಲ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಮಾಹಿತಿ ನೀಡಿದೆ.(ಏಜೆನ್ಸೀಸ್​)