ಥೈಲ್ಯಾಂಡ್ ಮತ್ತು ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ!Earthquake

earthquake
Published on

Earthquake | ಶುಕ್ರವಾರ (28) ರಂದು ನೆರೆಯ ಆಗ್ನೇಯ ಏಷ್ಯಾ ದೇಶವಾದ ಥೈಲ್ಯಾಂಡ್‌ ಹಾಗೂ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿರೋದಾಗಿ ವರದಿಯಾಗಿದೆ. ಮ್ಯಾನ್ಮಾರ್‌ನ ಮಂಡಲೇ ನಗರದಲ್ಲಿ ಸುಮಾರು 1.2 ಮಿಲಿಯನ್ ಜನಸಂಖ್ಯೆ ವಾಸವಿವೆ. ಇನ್ನೂ ಮ್ಯಾನ್ಮಾರ್‌ನ ಮಂಡಲೇ ನಗರದಿಂದ ಸುಮಾರು 17.2 ಕಿ.ಮೀ ದೂರದಲ್ಲಿ, 10 ಕಿ.ಮೀ ಆಳದವರೆಗೆ ಈ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ನೀಡಿದೆ.

ಬೂಕಂಪನದಿಂದಾಗಿ ಕಟ್ಟಡಗಳು ಅಲ್ಲೋಲಕಲ್ಲೋಲಗೊಂಡಿದ್ದು, ಭೂಕಂಪನದ ತೀವೃತೆ ಹೆಚ್ಚಾಗಿದ್ದರಿಂದ ಸ್ಥಳೀಯ ಕೆರೆಗಳಲ್ಲಿದ್ದ ನೀರು ಹೊರಗೆ ಚಿಮ್ಮಿದೆ ಎಂದು ಹೇಳಲಾಗಿದೆ.

ಪ್ರಬಲವಾಗಿ ಭೂಕಂಪ ಸಂಭವಿಸಿದ ಪರಿಣಾಮ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನೂರಾರು ಜನರು ಭಯಬೀತರಾಗಿದ್ದು, ಗಾಬರಿಗೊಂಡ ಜನರು ಬಹುಮಹಡಿ ಕಟ್ಟಡಗಳು ಹಾಗೂ ಹೋಟೆಲ್‌ಗಳಿಂದ ಹೊರಗೆ ಓಡಿ ಬಂದಿದ್ದಾರೆ. ಅಪರೂಪದ ಭೂಕಂಪದಿಂದ ಅನೇಕ ಕಟ್ಟಡಗಳು ಅಲುಗಾಡುತ್ತಿದ್ದರಿಂದ ಕೆಲ ಜನರನ್ನು ಆ ಪ್ರದೇಶದಿಂದ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಈ ಭೂಕಂಪದ ನಂತರ ಸಂಭವಿಸಿದ ಹಾನಿಯ ಬಗ್ಗೆ ಮ್ಯಾನ್ಮಾರ್‌ನಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net