ಬೆಂಗಳೂರು: 2024ರ ಸಾಲಿನ ‘ಈ ಹೊತ್ತಿಗೆ’ ಪ್ರಶಸ್ತಿಗಳಿಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ಈ ಹೊತ್ತಿಗೆ ಸಂಸ್ಥೆ ಆಹ್ವಾನಿಸಿದೆ. ವಿಜೇತ ಕೃತಿಗಳಿಗೆ ತಲಾ 10,000 ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತದೆ.
ಕಥೆ-ಕವನಗಳು ಸ್ವತಂತ್ರವಾಗಿರಬೇಕು. ಅನುವಾದಿತ ಆಗಿರಕೂಡದು. ಕಥಾ ಸಂಕಲನ ಕನಿಷ್ಠ 8ರಿಂದ 10 ಕಥೆಗಳನ್ನು ಒಳಗೊಂಡಿರಬೇಕು. ಕವನ ಸಂಕಲನ 40-45 ಕವನಗಳನ್ನು ಒಳಗೊಂಡಿರಬೇಕು. ಕಂಪ್ಯೂಟರಿನಲ್ಲಿ ಟೈಪ್ ಮಾಡಿ, ಪ್ರಿಂಟ್ ತೆಗೆಸಿ ಬೈಂಡ್ ಮಾಡಿದ ಸಂಕಲನದ 3 ಪ್ರತಿಗಳನ್ನು ಈ ಹೊತ್ತಿಗೆಯ ಅಂಚೆ ವಿಳಾಸಕ್ಕೆ ಕಳುಹಿಸಬೇಕು. ಕವಿಗಳು / ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಕಲನದ ಹೆಸರು, ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಬರೆದಿರಬೇಕು. ಸಂಕಲನದ ಯಾವುದೇ ಪುಟಗಳಲ್ಲಿ ಲೇಖಕರ ಹೆಸರು ಇರಬಾರದು. ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಪ್ರಶಸ್ತಿ ಪಡೆದ ಸಂಕಲನ ಮುದ್ರಣಗೊಳ್ಳಬೇಕು. ಕೃತಿ ಮುದ್ರಣಗೊಂಡರೆ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗೂ ಪ್ರಶಸ್ತಿ ಫಲಕ ‘ಈ ಹೊತ್ತಿಗೆ’ಯ ಹೊನಲು ಸಮಾರಂಭದಲ್ಲಿ ಸಲ್ಲುತ್ತದೆ. ಪ್ರಶಸ್ತಿ ಪಡೆದ ಕೃತಿಯನ್ನು ಮುದ್ರಿಸುವಾಗ ಮುಖಪುಟ ಹಾಗೂ ಪುಸ್ತಕದ ಒಳ ಪುಟದಲ್ಲಿ ಈ ಹೊತ್ತಿಗೆ (ಕಥಾ/ಕಾವ್ಯ) ಪ್ರಶಸ್ತಿ ವಿಜೇತ ಕೃತಿ ಎಂದು ಮುದ್ರಿಸಿರಬೇಕು. ಹಸ್ತಪ್ರತಿಗಳನ್ನು ಮರಳಿಸಲಾಗುವುದಿಲ್ಲ.
ಅಪ್ರಕಟಿತ ಕೃತಿಗಳು ತಲುಪಲು ನ. 30 ಕೊನೆಯ ದಿನ ಎಂದು ಪ್ರಕಟಣೆ ತಿಳಿಸಿದೆ. ಹಸ್ತಪ್ರತಿಗಳನ್ನು ಈ ಹೊತ್ತಿಗೆ, 65, ಮುಗುಳ್ನಗೆ, 3ನೇ ಅಡ್ಡರಸ್ತೆ , ಪಿಎನ್‌ಬಿ ನಗರ, ಕೋಣನಕುಂಟೆ, ಬೆಂಗಳೂರು- 560062 ಈ ವಿಳಾಸಕ್ಕೆ ಕಳಿಸಬಹುದು. ಹೆಚ್ಚಿನ ವಿವರಗಳಿಗೆ 9611782621 ಸಂಪರ್ಕಿಸಿ.