More

    ವಿದ್ಯಾರ್ಥಿ ಸ್ನೇಹಿ ಶಿಕ್ಷಕನಾಗಲು ಸರಳ ಸೂತ್ರಗಳು; ಏಕಾಗ್ರತೆ, ತರಗತಿ ನಿರ್ವಹಣೆಗೆ ಇಲ್ಲಿವೆ ಹಲವು ಟಿಪ್ಸ್​…

    ಬೆಂಗಳೂರು: ಶಾಲೆಗಳಲ್ಲಿ ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಮಕ್ಕಳು ಏಕಾಗ್ರತೆ ಕಳೆದುಕೊಳ್ಳದಂತೆ ಅಥವಾ ಏಕಕಾಲಕ್ಕೆ ಎಲ್ಲ ಮಕ್ಕಳನ್ನು ಸಂಭಾಳಿಸುವುದು ಪ್ರತಿಯೊಬ್ಬ ಶಿಕ್ಷಕನಿಗೂ ಸಾಹಸದ ಕೆಲಸ. ಕೆಲವು ಶಿಕ್ಷಕರು ಅದನ್ನು ತಮ್ಮ ನಾಜೂಕುತನದಿಂದ ನಿರ್ವಹಿಸಿದರೆ ಇನ್ನು ಕೆಲವರು ಕಟ್ಟುನಿಟ್ಟಾಗಿ ಇದ್ದು ನಿರ್ವಹಿಸಲು ಯತ್ನಿಸುತ್ತಾರೆ. ಇದಲ್ಲದೇ ಇಲ್ಲಿ ನೀಡಲಾದ ಕೆಲವು ಸಲಹೆಗಳನ್ನು ಅನುಸರಿಸಿದರೆ ತರಗತಿಗಳನ್ನು ಸುಲಭವಾಗಿ ನಿರ್ವಹಿಸಬಹುದು.

    ತರಗತಿ ನಿಯಮ

    ತರಗತಿಗಳ ನಿಯಮಗಳಿಗೆ ಮೊದಲ ಆದ್ಯತೆ ನೀಡಬೇಕು. ಈ ನಿಯಮಗಳನ್ನು ರೂಪಿಸುವಾಗ ಸರಳವಾಗಿರಬೇಕು ಹಾಗೂ ವಿದ್ಯಾರ್ಥಿಗಳ ಸಹಮತ ಪಡೆಯಬೇಕು. ಅಲ್ಲದೇ ತರಗತಿಗಳಿಗೆ ನಿಯಮಗಳನ್ನು ಸ್ವತಃ ವಿದ್ಯಾರ್ಥಿಗಳ ಮೂಲಕವೇ ರೂಪಿಸಿ ಜಾರಿಗೊಳಿಸಿದರೆ ಮತ್ತಷ್ಟು ಪರಿಣಾಮಕಾರಿ.

    ನಿರ್ಧಾರ ಕೈಗೊಳ್ಳಲು ಸ್ವಾತಂತ್ರ್ಯ

    ಪ್ರತಿಯೊಬ್ಬ ವಿದ್ಯಾರ್ಥಿಯ ನಾಯಕತ್ವ ಸಾಮರ್ಥ್ಯ ಅನಾವರಣಗೊಳ್ಳುವುದು ಅಥವಾ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಶಾಲಾ ಹಂತಗಳಿಂದಲೇ ಆಗಿರುತ್ತದೆ. ಅದೇ ರೀತಿ ಶಿಕರು ಇದಕ್ಕೆ ನೀರೆರೆದು ಪೋಷಿಷಬೇಕಿದ್ದು, ಕೆಲವೊಂದು ಸಂದರ್ಭಗಳಲ್ಲಿ ಕೆಲವು ವಿಚಾರಗಳಿಗೆ ಸೂಕ್ತ ನಿರ್ಧಾರಗಳನ್ನು ಸ್ವತಃ ವಿದ್ಯಾರ್ಥಿಗಳೇ ಕೈಗೊಳ್ಳುವಂತೆ ಪ್ರೇರೇಪಿಸಬೇಕು. ಲಿತಾಂಶದ ಕುರಿತು ಚಿಂತಿಸದೇ ಅವರನ್ನು ತಿದ್ದಿ ಮುನ್ನಡೆಸಬೇಕು. ಇದು ಪ್ರತಿಯೊಂದು ವಿದ್ಯಾರ್ಥಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವೂ ವಹಿಸುತ್ತದೆ.

    ಕಲಿಕಾಸಕ್ತಿಯ ವಾತಾವರಣ

    ತರಗತಿ ಎಂದ ಮೇಲೆ ಶ್ರೀವಾಗಿ ಕಲಿಯುವ ಹಾಗೂ ನಿಧಾನವಾಗಿ ಕಲಿಯುವ ವಿದ್ಯಾರ್ಥಿಗಳು ಇರುವುದು ಸರ್ವೆ ಸಾಮಾನ್ಯ. ಇಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಪರಿಗಣಿಸಬೇಕಿದ್ದು, ಕಲಿಕೆಯೆಡೆಗೆ ವಿದ್ಯಾರ್ಥಿಗಳನ್ನು ತಮ್ಮ ಕೌಶಲಗಳ ಮೂಲಕ ಶಿಕರು ಪ್ರೇರೇಪಿಸಬೇಕು. ಶ್ರೀ ಗ್ರಹಿಕೆಯ ವಿದ್ಯಾರ್ಥಿಗಳನ್ನು ಬೆನ್ನು ತಟ್ಟುತ್ತಾ ನಿಧಾನ ಗ್ರಹಿಕೆಯ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿ ತಿದ್ದುವ ಮೂಲಕ ಕಲಿಕಾ ವಾತಾವರಣವನ್ನು ಶಿಕರು ನಿರ್ಮಿಸಬೇಕು.

    ಚರ್ಚೆಗೆ ಸಮಯ ನಿಗದಿ

    ತರಗತಿಯೊಂದಕ್ಕೆ ನೀಡಲಾಗುವ ಅವಧಿಯ ಅವಲಂಬಿತವಾಗಿ ಪ್ರತಿ ದಿನವೂ ಶಿಕರು ರ್ನಿದಿಷ್ಟ ನಿಮಿಷಗಳ ಅವಧಿಯನ್ನು ವಿಚಯಗಳ ಚರ್ಚೆಗೆಂದೇ ಮೀಸಲಿಡಬೇಕು. ಈ ವೇಳೆ ದೇಶದಕ್ಕೆ ಸಂಬಂಧಿಸಿದ ವಿಚಾರಗಳು, ಪ್ರಚಲಿತ ಘಟನೆಗಳು, ವಿದ್ಯಾರ್ಥಿಗಳು ಶೈಣಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಕ್ತವಾಗಿ ಶಿಕರು ಹಾಗೂ ವಿದ್ಯಾರ್ಥಿಗಳ ನಡುವೆ ಚರ್ಚೆಯಾಗಬೇಕು. ಈ ವೇಳೆ ಶಿಕರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಇದು ವಿದ್ಯಾರ್ಥಿಗಳ ಆತ್ಮಿವಿಶ್ವಾಸ, ಧೈರ್ಯವನ್ನು ವೃದ್ಧಿಸುವುದು ಖಂಡಿತ.

    ಬಾಂಧವ್ಯ ಕಾಯ್ದುಕೊಳ್ಳುವಿಕೆ

    ಪ್ರತಿಯೊಂದು ವಿದ್ಯಾರ್ಥಿಗೂ ಶಾಲಾ ದಿನಗಳಲ್ಲಿ ನೆಚ್ಚಿನ ಶಿಕ್ಷಕ ಎಂದು ಇದ್ದೇ ಇರುತ್ತಾರೆ. ಆದರೆ ಎಲ್ಲರಿಗೂ ಒಬ್ಬನೇ ನೆಚ್ಚಿನ ಶಿಕ್ಷಕರಾಗಿರುವುದು ಅಪರೂಪ. ಓರ್ವ ಶಿಕ್ಷಕನು ಮುಖ್ಯವಾಗಿ ಈ ವಿಚಾರ ಅರಿತಕೊಂಡಿರಬೇಕು. ಶಿಕ್ಷಕನು ತನ್ನ ವಿದ್ಯಾರ್ಥಿಗಳೊಂದಿಗೆ ಸಂಯಮದಿಂದ ಇದ್ದು, ಪ್ರತಿಯೊಂದು ವಿಚಾರದಲ್ಲಿಯೂ ವಿದ್ಯಾರ್ಥಿಗಳ ಜತೆ ತೊಡಗಿಸಿಕೊಳ್ಳಬೇಕು. ಇದು ಶಿಕ್ಷಕ ಹಾಗೂ ವಿದ್ಯಾರ್ಥಿ ನಡುವಿನ ಬಾಂಧವ್ಯ ವೃದ್ಧಿಸುವುದು ನಿಶ್ಚಿತ.

    ಶಿಕ್ಷೆಯೇ ಮಾನದಂಡವಲ್ಲ

    ವಿದ್ಯಾರ್ಥಿಗಳು ತಮಗೆ ನೀಡಿದ ಮನೆಗೆಲಸದಲ್ಲಿ ಅಥವಾ ಚಟುವಟಿಕೆಗಳಲ್ಲಿ ಸೋಮಾರಿತನ ಮಾಡುವುದು ಸಹಜ. ಅದೇ ರೀತಿ ತರಗತಿಗಳಲ್ಲಿ ತುಂಟಾಟಗಳು ಕೂಡ ಸರ್ವೆ ಸಾಮಾನ್ಯ. ಈ ವೇಳೆ ಶಿಕ್ಷಕರು ಏಕಾಏಕಿ ವಿದ್ಯಾರ್ಥಿಗಳನ್ನು ದಂಡಿಸುವ ಬದಲು ನಯವಾಗಿ ಬುದ್ಧಿ ಹೇಳಬೇಕು. ಬಳಿಕ ಗದರುವ ತಂತ್ರಕ್ಕೆ ಮೊರೆಹೋಗಬೇಕಿದ್ದು, ಅನಿವಾರ್ಯವಾದರೆ ಮಾತ್ರ ದಂಡಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts