More

    Success Story: ಎರಡೂ ಕೈಗಳಿಲ್ಲದ ಬಾಲೆಗೆ ಒಲಿದಿದೆ ಬಿಲ್ವಿದ್ಯೆ- ಏಷ್ಯನ್​ ಪ್ಯಾರಾ ಗೇಮ್ಸ್‌ನಲ್ಲಿ ಮುಡಿಗೇರಿದ್ದು 2ಚಿನ್ನ, 1ಬೆಳ್ಳಿ ಪದಕ

    ನವದೆಹಲಿ: ಆತ್ಮವಿಶ್ವಾಸ, ದೃಢಸಂಕಲ್ಪವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ 16 ವರ್ಷದ ಶೀತಲ್ ದೇವಿ ಉತ್ತಮ ನಿದರ್ಶನ. ಕೈಗಳಿಲ್ಲದೆ ಜನಿಸಿದರೂ, ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಪಡೆಯುವ ಮೂಲಕ ತನ್ನ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸಿದ್ದಾಳೆ. ಶೀತಲ್ ದೇವಿ ತನ್ನ ಬುಜ, ಬಾಯಿ ಪಾದ ಬಳಸಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಧನಸ್ಸಿನಲ್ಲಿ ಬಾಣವನ್ನು ಬಿಡುವ ಪರಿ ನಿಬ್ಬೆರಗಾಗಿಸುವಂತಿದೆ.

    ಇದನ್ನೂ ಓದಿ: ಸತ್ತ 27ನಿಮಿಷದ ನಂತರ ಬದುಕಿದ ಮಹಿಳೆ ತಿಳಿಸಿದ್ದು”ಸ್ವರ್ಗ ನಿಜ”!
    ಮಹಿಳಾ ಆರ್ಚರಿ ಸ್ಪರ್ಧೆಯಲ್ಲಿ ಫೈನಲ್‌ನಲ್ಲಿ ಶೀತಲ್ ಸಿಂಗಾಪುರದ ಅಲಿಮ್ ನೂರ್ ಸೈಹಿದಾರಿಂದ ಕಠಿಣ ಸವಾಲು ಎದುರಿಸಿದಳು. ಕೊನೆಯ ಎರಡು ಸುತ್ತುಗಳಲ್ಲಿ ಸತತ ಆರು ಮತ್ತು ಹತ್ತು ರಿಂಗ್ ಹೊಡೆತಗಳನ್ನು ಕೊಟ್ಟು ಗೆಲುವಿನ ದಡ ಸೇರಿದಳು. ಆ ಮೂಲಕ 2ಚಿನ್ನ ಭಾರತದ ಪಾಲಾಗುವಂತಾಯಿತು.

    ಯಾರೀ ಬಾಲೆ?: ಶೀತಲ್ ದೇವಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಲೋಯಿ ಧಾರ್ ಎಂಬ ಕುಗ್ರಾಮದಲ್ಲಿ ಜನಿಸಿದ್ದು, ಫೋಕೊಮೆಲಿಯಾ ಎಂಬ ಅಪರೂಪದ ಕಾಯಿಲೆಯಿಂದಾಗಿ ಆಕೆಯ ಎರಡೂ ಕೈಗಳು ಅಭಿವೃದ್ಧಿಯಾಗಿರಲಿಲ್ಲ. ಆ ರಾಜ್ಯದಲ್ಲಿ ಕ್ರೀಡೆಗೆ ಪೂರಕ ಸೌಲಭ್ಯಗಳು ಇಲ್ಲದಿದ್ದರೂ ಅಂತಾರಾಷ್ಟ್ರೀಯ ಕ್ರೀಡೆಗೆ ಆಕೆ ಪಯಣ ಮಾಡಿ ಅದ್ಭುತ ಸಾಧನೆ ಮಾಡಿರುವುದು ಮಾನವ ಚೇತನದ ಅದಮ್ಯ ಶಕ್ತಿಗೆ ಸಾಕ್ಷಿಯಾಗಿ ನಿಂತಿದ್ದಾಳೆ.

    ಸೇನೆ ಪ್ರೋತ್ಸಾಹ: 2019 ರಲ್ಲಿ ಕಿಶ್ತ್ವಾರ್ ನಲ್ಲಿ ನಡೆದ ಯುವ ಕ್ರೀಡಾಕೂಟದಲ್ಲಿ ಶೀತಲ್ ಪಾಲ್ಗೊಂಡಿದ್ದಳು. ಆಗ ಭಾರತೀಯ ಸೇನೆಯು ಆಕೆಯನ್ನು ಗುರುತಿಸಿದ್ದು, ಬಿಲ್ಲುಗಾರಿಕೆಗೆ ಪ್ರೋತ್ಸಾಹಿಸಲಾಯಿತು. ಮೊದಲು ಆಕೆಗೆ ಪ್ರಾಸ್ಥೆಟಿಕ್ ತೋಳನ್ನು ಒದಗಿಸುವ ಯೋಜನೆ ಇತ್ತು, ಆದರೆ ಅದು ಸಾಧ್ಯವಾಗದಿದ್ದಾಗ ಬಲಗಾಲನ್ನು ಬಳಸಿ ಬಿಲ್ಲನ್ನು ಮೇಲಕ್ಕೆತ್ತಿ ತನ್ನ ಬಲ ಭುಜದಿಂದ ದಾರವನ್ನು ಹಿಂದಕ್ಕೆ ಎಳೆದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಿಲ್ಲು ಮೂಲಕ ಬಾಯಿಯಿಂದ ಬಾಣವನ್ನು ಬಿಡುವುದನ್ನು ರೂಢಿಮಾಡಿಕೊಳ್ಳುತ್ತಾಳೆ.

    ಕ್ರೀಡಾಸಕ್ತಿ ಬೆಳೆದಿದ್ದು ಹೀಗೆ: “ನಾನು ಆಕೆಯನ್ನು 2022ರಲ್ಲಿ ರಾಷ್ಟ್ರೀಯ ಪ್ಯಾರಾ ಚಾಂಪಿಯನ್‌ಶಿಪ್‌ಗೆ ಕರೆದೊಯ್ದೆ. ಅಲ್ಲಿ ವಿವಿಧ ಅಂಗವಿಕಲತೆ ಹೊಂದಿರುವ ಬಿಲ್ಲುಗಾರರನ್ನು ನೋಡಿದಳು. ಕ್ರೀಡಾಸಕ್ತಿ ರೂಢಿಸಿಕೊಂಡು ವೇಗವಾಗಿ ಪ್ರಗತಿ ಸಾಧಿಸಿದಳು” ಎಂದು ಆಕೆಯ ತರಬೇತುದಾರ ಕುಲದೀಪ್ ಕುಮಾರ್ ನೆನಪಿಸಿಕೊಂಡರು, ಶೀತಲ್ ಜೆಕ್ ಗಣರಾಜ್ಯದಲ್ಲಿ ನಡೆದಿದ್ದ ಪ್ಯಾರಾ-ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಳು.

    ಚಾಕೋಲೇಟ್​ಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಸೀಸ​, ಕ್ಯಾಡ್ಮಿಯಂ ಪತ್ತೆ: ಗಂಭೀರ ಆರೋಗ್ಯ ಸಮಸ್ಯೆಗಳ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts