More

    ಬಸವಣ್ಣನ ವಚನ ಆತ್ಮಶುದ್ಧಿಗೆ ಸರಳ ಮಾರ್ಗ

    ಧಾರವಾಡ: ವಿಶ್ವಗುರು ಬಸವಣ್ಣನವರ ಕಳಬೇಡ… ಕೊಲಬೇಡ ವಚನವು ಆತ್ಮಶುದ್ಧಿಗೆ ಸರಳ ಮಾರ್ಗವಾಗಿದೆ. ಅಂತರAಗ, ಬಹಿರಂಗ ಶುದ್ಧಿಗೆ ಕಾರಣವಾಗಿದೆ ಎಂದು ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಪು ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಶಿರೂರಿನ ವಿಶ್ವಭಾರತಿ ರಮ್ಯ ನಾಟಕ ಮಂಡಳಿಯ ೨೦ನೇ ವಾರ್ಷಿಕೋತ್ಸವ ಹಾಗೂ ಬಸವರಂಗ ಕಲಾಭೂಷಣ' ಪ್ರಶಸ್ತಿ ಪ್ರದಾನ ಹಾಗೂಜಗಜ್ಯೋತಿ ಬಸವೇಶ್ವರ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
    ಬಸವಣ್ಣನವರ ಎಲ್ಲ ವಚನಗಳಲ್ಲಿ ನಮ್ಮ ಸಂವಿಧಾನದ ಆಶಯಗಳು ಹಾಗೂ ಜಗತ್ತಿನ ಎಲ್ಲ ದಾರ್ಶನಿಕರ ವಿಚಾರಧಾರೆಗಳಿವೆ. ೯೦೦ ವರ್ಷಗಳ ನಂತರವೂ ಬಸವಣ್ಣ ಸಾಹಿತ್ಯ- ನಾಟಕದ ರೂಪದಲ್ಲಿ ಪ್ರಸ್ತುತರಾಗಿದ್ದಾರೆ. ರಂಗ ಕಲಾವಿದ ಬಸವರಾಜ ಬೆಂಗೇರಿ ಜಗಜ್ಯೋತಿ ಬಸವೇಶ್ವರ ನಾಟಕದ ಮೂಲಕ ಬಸವಣ್ಣನವರನ್ನು ಜೀವಂತವಿರಿಸಿದ್ದಾರೆ ಎಂದರು.
    ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗಕಲಾವಿದರಾದ ಪುಷ್ಪಮಾಲಾ ಅಣ್ಣಿಗೇರಿ ಹಾಗೂ ಕೆ.ಎನ್. ಮಂಜುನಾಥ ಅವರಿಗೆ `ಬಸವರಂಗ ಕಲಾಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಬಸವರಾಜ ಬೆಂಗೇರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಶಿವಾನಂದ ಹೂಗಾರ ವಂದಿಸಿದರು.
    ನAತರ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನಗೊಂಡು ಜನಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts