More

    ಇಂದಿನಿಂದ ಏಷ್ಯನ್​ ಪ್ಯಾರಾ ಗೇಮ್ಸ್​; ಭಾರತಕ್ಕೆ ಮತ್ತೆ ಪದಕಗಳ ಶತಕದ ಹಂಬಲ

    ಹಾಂಗ್​ರೆೌ: ಏಷ್ಯನ್​ ಗೇಮ್ಸ್​ 19ನೇ ಆವೃತ್ತಿಯಲ್ಲಿ ಒಟ್ಟು 107 ಪದಕಗಳನ್ನು ಗೆದ್ದು ಹೊಸ ಇತಿಹಾಸ ಬರೆದಿರುವ ಭಾರತ ಈಗ ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲೂ ಪದಕಗಳ ಶತಕ ಸಿಡಿಸುವ ಉತ್ಸಾಹದಲ್ಲಿದೆ. ಏಷ್ಯಾಡ್​ ನಡೆದ ಚೀನಾದ ಹಾಂಗ್​ರೆೌನಲ್ಲೇ ಪ್ಯಾರಾ ಕ್ರೀಡಾಪಟುಗಳ ಏಷ್ಯನ್​ ಕ್ರೀಡಾಹಬ್ಬವೂ ಆಯೋಜನೆಗೊಂಡಿದ್ದು, ಭಾನುವಾರ ನಡೆಯಲಿರುವ ವರ್ಣರಂಜಿತ ಉದ್ಘಾಟನಾ ಸಮಾರಂಭದೊಂದಿಗೆ 7 ದಿನಗಳ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ.

    ಭಾರತ 196 ಪುರುಷ, 113 ಮಹಿಳೆಯರ ಸಹಿತ 309 ಅಂಗವಿಕಲ ಕ್ರೀಡಾಪಟುಗಳ ಬೃಹತ್​ ತಂಡದೊಂದಿಗೆ ಕಣಕ್ಕಿಳಿಯಲಿದ್ದು, ಟೋಕಿಯೊ ಪ್ಯಾರಾಲಿಂಪಿಕ್ಸ್​ ಸ್ವರ್ಣ ವಿಜೇತರಾದ ಶೂಟರ್​ ಅವನಿ ಲೇಖರ ಮತ್ತು ಜಾವೆಲಿನ್​ ಎಸೆತಗಾರ ಸುಮಿತ್​ ಆಂತಿಲ್​ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ರೋಯಿಂಗ್​, ಕನೋಯಿಂಗ್​, ಲಾನ್​ಬೌಲ್​, ಟೇಕ್ವಾಂಡೊ ಮತ್ತು ಬ್ಲೆ$ಂಡ್​ ುಟ್​ಬಾಲ್​ನಲ್ಲಿ ಭಾರತ ಮೊದಲ ಬಾರಿ ಸ್ಪರ್ಧಿಗಳನ್ನು ಕಣಕ್ಕಿಳಿಸುತ್ತಿದೆ. ಭಾರತ ತಂಡದಲ್ಲಿ ಸುಮಾರು ಅರ್ಧದಷ್ಟು ಪ್ಯಾರಾ ಕ್ರೀಡಾಪಟುಗಳು ಅಥ್ಲೆಟಿಕ್ಸ್​ (123) ಮತ್ತು ಬ್ಯಾಡ್ಮಿಂಟನ್​ನಲ್ಲೇ (29) ಸ್ಪರ್ಧಿಸಲಿದ್ದಾರೆ. ಕರ್ನಾಟಕದ 14 ಕ್ರೀಡಾಪಟುಗಳೂ ಕಣದಲ್ಲಿದ್ದಾರೆ.

    2021ರ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ದಾಖಲೆಯ 19 ಪದಕ ಗೆದ್ದಿದ್ದ ಭಾರತ ತಂಡದ 54 ಕ್ರೀಡಾಪಟುಗಳ ಪೈಕಿ 51 ಕ್ರೀಡಾಪಟುಗಳು ಹಾಂಗ್​ರೆೌನಲ್ಲೂ ಸ್ಪರ್ಧಿಸಲಿದ್ದಾರೆ. ವೀಲ್​ಚೇರ್​ ಅಥ್ಲೀಟ್​ ಅಮಿತ್​ ಕುಮಾರ್​ ಸರೋಹ ಮತ್ತು ಪ್ಯಾರಾ ಬ್ಯಾಡ್ಮಿಂಟನ್​ ಆಟಗಾರ್ತಿ ಪಾರುಲ್​ ಪಾರ್ಮರ್​ ಆರಂಭೋತ್ಸವದಲ್ಲಿ ಭಾರತ ತಂಡದ ಧ್ವಜಧಾರಿಗಳಾಗಿ ಆಯ್ಕೆಯಾಗಿದ್ದಾರೆ.

    ಭಾರತ ಕಳೆದ 3 ಆವೃತ್ತಿಗಳಲ್ಲೂ ಪ್ರತಿ ಬಾರಿ ದ್ವಿಗುಣ ಪದಕಗಳನ್ನು ಗೆಲ್ಲುತ್ತ ಬಂದಿದ್ದು, ಕಳೆದ ಬಾರಿ 72 ಪದಕ ಗೆದ್ದಿದ್ದ ಭಾರತ ಈ ಸಲವೂ 120ಕ್ಕಿಂತ ಅಧಿಕ ಪದಕದ ನಿರೀೆ ಹೊಂದಿದೆ. ಅಥ್ಲೆಟಿಕ್ಸ್​ನಲ್ಲೇ 45ಕ್ಕೂ ಅಧಿಕ ಪದಕದ ನಿರೀಕ್ಷೆ ಇದೆ. ಆದರೆ ಒಟ್ಟಾರೆಯಾಗಿ ಆತಿಥೇಯ ಚೀನಾವೇ ಪ್ರಾಬಲ್ಯ ಸಾಧಿಸಲಿದೆ.

    ಕ್ರೀಡಾಕೂಟದಲ್ಲಿ 43 ದೇಶಗಳಿಂದ 4 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಏಷ್ಯಾಡ್​ನಂತೆ ಪ್ಯಾರಾ ಗೇಮ್ಸ್​ ಕೂಡ ಕರೊನಾದಿಂದಾಗಿ ಒಂದು ವರ್ಷ ತಡವಾಗಿ ನಡೆಯುತ್ತಿದೆ. ವಿಶ್ವ ಉದ್ದೀಪನ ನಿಗ್ರಹ ಟಕದ (ವಾಡಾ) ನಿಯಮಾವಳಿ ಉಲ್ಲಂನೆಗಾಗಿ ರಾಷ್ಟ್ರೀಯ ಲಾಂಛನದ ಬಳಕೆಯನ್ನು ಏಷ್ಯನ್​ ಪ್ಯಾರಾಲಿಂಪಿಕ್ಸ್​ ಸಮಿತಿ ನಿಷೇಧಿಸಿರುವುದರಿಂದ ಉತ್ತರ ಕೊರಿಯಾ ಕೊನೇಕ್ಷಣದಲ್ಲಿ ಕೂಟದಿಂದ ಹಿಂದೆ ಸರಿದಿದೆ.

    ನ್ಯೂನತೆಗೆ ತಕ್ಕಂತೆ ವರ್ಗೀಕರಣ
    ಪ್ಯಾರಾ ಕ್ರೀಡೆಯಲ್ಲಿ ಕ್ರೀಡಾಪಟುಗಳ ಅಂಗ ನ್ಯೂನತೆಗೆ ತಕ್ಕಂತೆ ಅವರನ್ನು ವರ್ಗೀಕರಿಸಲಾಗುತ್ತದೆ. ಇದರಿಂದಾಗಿ ಕೆಲವು ಕ್ರೀಡೆಗಳಲ್ಲಿ ಒಂದೇ ವಿಭಾಗದಲ್ಲಿ ಹಲವು ವರ್ಗೀಕರಣದೊಂದಿಗೆ ಪ್ರತ್ಯೇಕವಾದ ಸ್ಪರ್ಧೆಗಳು ನಡೆಯುತ್ತವೆ. ಉದಾಹರಣೆಗೆ ಪ್ಯಾರಾ ಬ್ಯಾಡ್ಮಿಂಟನ್​ನಲ್ಲೇ ಸಿಂಗಲ್ಸ್​ ವಿಭಾಗದಲ್ಲಿ 6 ಭಿನ್ನ ವರ್ಗೀಕರಣದೊಂದಿಗೆ ಸ್ವರ್ಣ ಪದಕಕ್ಕೆ ಸ್ಪರ್ಧೆ ನಡೆಯುತ್ತವೆ. ಪುರುಷರ 100 ಮೀ. ಓಟದಲ್ಲಿ ಒಟ್ಟು 15 ವರ್ಗೀಕರಣದೊಂದಿಗೆ ಸ್ಪರ್ಧೆ ನಡೆಯುತ್ತವೆ.

    *566: ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ 22 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಒಟ್ಟಾರೆ 566 ಸ್ವರ್ಣ ಪದಕಗಳು ಪಣಕ್ಕಿವೆ. ಈ ಪೈಕಿ ಭಾರತ 17 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ.

    ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಭಾರತ
    ವರ್ಷ (ಚಿನ್ನ ಬೆಳ್ಳಿ ಕಂಚು) ಒಟ್ಟು
    2010 (1, 4, 9) 14
    2014 (3, 14, 16) 33
    2018 (15, 24, 33) 72

    ವಿಶ್ವಕಪ್​ನಲ್ಲಿ ‘ಓಂ’ ಬರೆದ ಬ್ಯಾಟ್​ನಲ್ಲಿ ಆಡುತ್ತಿದ್ದಾರೆ ದಕ್ಷಿಣ ಆಫ್ರಿಕಾ ಸ್ಪಿನ್ನರ್​ ಕೇಶವ್​ ಮಹಾರಾಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts