ಕಲಬುರಗಿ: ಇಲ್ಲಿನ ಕಮಲಾಪುರ ತಹಸಿಲ್‌ನಲ್ಲಿ ವಿಹಾರಕ್ಕೆಂದು ಬಂದಿದ್ದ ಹೈದರಾಬಾದ್‌ನ ಸ್ನೇಹಿತರ ಗ್ಯಾಂಗ್ನಲ್ಲಿ ವ್ಯಕ್ತಿಯೊಬ್ಬ ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದು, ಮಾತಿಗೆ ಮಾತು, ಸವಾಲಿಗೆ ಸವಾಲು ಹಾಕುತ ಹೋದವನು ಕಡೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಲಬುರ್ಗಿಯ ಚಂದ್ರಾಯನ್ಗುಟ್ಟದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಮಧುಸೂದನ್ ತಂಡಕ್ಕೆ 3 ಸ್ಥಾನಗಳಲ್ಲಿ ಭರ್ಜರಿ ಗೆಲುವು
ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ತನ್ನೊಂದಿಗೆ ಇದ್ದ ಸ್ನೇಹಿತರು ಹಾಕಿದ ಸವಾಲನ್ನು ಒಪ್ಪಿ, ನೋಡ ನೋಡುತ್ತಿದ್ದಂತೆ ಕೆರೆಗೆ ಜಿಗಿದಿದ್ದಾನೆ. ಈ ಘಟನೆಯ ದೃಶ್ಯ ಆತನ ಸ್ನೇಹಿತರ ಮೊಬೈಲ್ನಲ್ಲಿ ಸೆರೆಯಾಗಿದ್ದು, ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಆಘಾತಕಾರಿ ಸಂಗತಿಯೆಂದರೆ, ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡ ಸ್ನೇಹಿತರು, ಈಜು ಬಾರದಿದ್ದರೂ ನದಿಗೆ ಜಿಗಿದ ತಮ್ಮ ಗೆಳೆಯನನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ.
ಇಡೀ ಘಟನೆಯನ್ನು ರೆಕಾರ್ಡ್ ಮಾಡುವ ಬದಲು ಆತನನ್ನು ಸಾವಿನಿಂದ ರಕ್ಷಣೆ ಮಾಡಬಹುದಿತ್ತು. ಆದರೆ, ಈ ಪ್ರಯತ್ನಕ್ಕೆ ಸ್ನೇಹಿತರು ಮುಂದಾಗದೆ ಇದ್ದಿದ್ದು, ಇದೀಗ ಭಾರೀ ಅನುಮಾನಕ್ಕೆ ಕಾರಣವಾಗಿದೆ. ನೀರಿನ ಆಳ ತಿಳಿಯದೆ ಜಿಗಿದ ಜಾವೇದ್ (ಮೃತ ವ್ಯಕ್ತಿ) ಮೊದಲೇ ನಿಲ್ಲಲಾಗದೆ, ಸರಿಯಾಗಿ ನಡೆಯಲಾಗದೆ ಇರುವುದು ದೃಶ್ಯದಲ್ಲಿ ಸೆರೆಯಾಗಿದೆ,(ಏಜೆನ್ಸೀಸ್).