ನವದೆಹಲಿ: ಗ್ರಂಥಾಲಯಗಳನ್ನು ಒಂದು ದೇಶ ಅಥವಾ ಸಮಾಜದ ಸಾಮೂಹಿಕ ಪ್ರಜ್ಞೆ ಮತ್ತು ಬುದ್ಧಿಶಕ್ತಿಯ ಸಂಕೇತ ಎಂದು ಪರಿಗಣಿಸಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಭಿಪ್ರಾಯಪಟ್ಟರು.
ಜ್ಞಾನದ ಶಕ್ತಿಕೇಂದ್ರವಾಗಿ ಭಾರತದ ಪ್ರಯಾಣವನ್ನು ಪ್ರದರ್ಶಿಸುವ 'ಗ್ರಂಥಾಲಯಗಳ ಉತ್ಸವ'ವನ್ನು ಇಂದು ನವದೆಹಲಿಯಲ್ಲಿ ಉದ್ಘಾಟಿಸಿದ ಅವರು, ಗ್ರಂಥಾಲಯಗಳ ಮಹತ್ವದ ಕುರಿತು ಮಾತನಾಡಿದರು.
ಗ್ರಂಥಾಲಯಗಳು ನಾಗರಿಕತೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಪ್ರಾಚೀನ ಮತ್ತು ಮಧ್ಯಕಾಲೀನ ಅವಧಿಗಳಲ್ಲಿ ಅನೇಕ ದೇಶಗಳ ಜನರು ಭಾರತದಿಂದ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಅವುಗಳನ್ನು ಅನುವಾದಿಸಿ ಜ್ಞಾನವನ್ನು ಪಡೆದರು ಎಂದು ರಾಷ್ಟ್ರಪತಿ ಹೇಳಿದರು.
ಪುಸ್ತಕಗಳಲ್ಲಿ ಭೂಮಿಯ ಸತ್ವ ಮತ್ತು ಆಕಾಶದ ವಿಶಾಲತೆ ಇರುತ್ತದೆ. ಒಂದು ಸಣ್ಣ ಪುಸ್ತಕವು ವಿಶ್ವ ಇತಿಹಾಸದ ಗತಿಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ದ್ರೌಪದಿ ಮುರ್ಮು ಅಭಿಪ್ರಾಯಪಟ್ಟರು.
ಭಾರತವನ್ನು ವಿಶ್ವದ ಜ್ಞಾನದ ಸೂಪರ್ ಪವರ್ ಮಾಡುವ ಗುರಿಯತ್ತ ಗ್ರಂಥಾಲಯಗಳ ಉತ್ಸವವು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಕಾನೂನು ಹಾಗೂ ನ್ಯಾಯ ಖಾತೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದರು.
ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ದೇಶದ ಮೂಲೆಮೂಲೆಯನ್ನು ತಲುಪಲು ಮತ್ತು ಗ್ರಂಥಾಲಯ ಅಭಿವೃದ್ಧಿಗಾಗಿ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಮುಂದುವರಿಸುವ ಜತೆಗೆ ಓದುವ ಸಂಸ್ಕೃತಿಯನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವೆ ಮೀನಾಕ್ಷಿ ಲೇಖಿ ಹೇಳಿದರು.