ನ್ಯೂಸ್

ಡಬಲ್ ಇಂಜಿನ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಅಗತ್ಯ: ಜೆ.ಪಿ.ನಡ್ಡಾ

ಸೇಡಂ: ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅವಶ್ಯಕತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಭಿಪ್ರಾಯಪಟ್ಟಿದ್ದಾರೆ. ಸೇಡಂನಲ್ಲಿ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್‌ ತೆಲ್ಕೂರ್ ಪರ ಕೈಗೊಂಡಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 17 ಸಾವಿರ ಕೋಟಿ ರೂ. ನೀಡಲಾಗಿದೆ. ಪ್ರತಿವರ್ಷ 10 ಸಾವಿರ ರೂ. ಹಣ ರೈತರಿಗೆ ನೀಡಲಾಗುತ್ತಿದೆ ಎಂದ ನಡ್ಡಾ, ಕರ್ನಾಟಕ ಬಿಜೆಪಿ ಪ್ರಣಾಳಿಕೆಯನ್ನು ಕೊಂಡಾಡಿದರು. ಇದು ಕೇವಲ ಡಬಲ್ ಇಂಜಿನ್ ಸರ್ಕಾರವಲ್ಲ ಅಷ್ಟೇ ಅಲ್ಲ, ಇದು ಪವರ್‌'ಫುಲ್ ಸರ್ಕಾರ. ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರುವ ಅವಶ್ಯಕತೆ ಇದೆ ಎಂದು ಹೇಳಿದರು.

ಸಮಾಜವನ್ನು ಒಡೆಯುವುದೇ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಅಜೆಂಡವಾಗಿದೆ. ಇದು ಕೇವಲ ರಾಜಕುಮಾರ ಪಾಟೀಲ್‌ ಗೆಲುವು ಅಗಬಾರದು, ಇದು ರಾಷ್ಟ್ರಕೂಟರ ನಾಡಿನ ಜನರ ಐತಿಹಾಸಿಕ ಗೆಲುವು ಆಗಬೇಕು. ಇದು ಪಾಟೀಲ್ ಚುನಾವಣೆ ಅಲ್ಲ, ಇದು ರಾಜ್ಯದ ಭವಿಷ್ಯದ ಚುನಾವಣೆ ಎನ್ನುತ್ತ ಅವರು ಮತಯಾಚನೆ ಮಾಡಿದರು.