ನ್ಯೂಸ್

ಡಿಸಿಎಂ ಡಿಕೆಶಿ ಕಾರ್ಯಕರ್ತರ ಮನೆಗೆ ಉಡುಗೊರೆಯಾಗಿ ಟಿವಿ ಕಳುಹಿಸಿ ಕೊಟ್ಟದ್ಯಾಕೆ?

ಚಾಮರಾಜನಗರ: ಇದೀಗ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸ ಅಧ್ಯಕ್ಷರಾಗಿ ಕಾಂಗ್ರೆಸ್‍ ಕಾರ್ಯಕರ್ತರ ಮನೆಗೆ ಟಿವಿ ಕಳುಹಿಸಿ ಕೊಟ್ಟಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‍ಗಳನ್ನು ಹೆಚ್ಚು ಮನೆಗೆ ತಲುಪಿಸಿದ ಕಾರ್ಯಕರ್ತರಿಗೆ ಟಿವಿ ಉಡುಗೊರೆ ಕೊಡುವುದಾಗಿ ಘೋಷಿಸಿದ್ದರು. ಇದೀಗ ಡಿಕೆ ಶಿವಕುಮಾರ್ ಹನೂರು ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರಿಗೆ 10 ಟಿವಿಗಳನ್ನು ಕೊಡುಗೆ ನೀಡಿದ್ದಾರೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲನ್ನು ಕಂಡಿತ್ತು. ಹಿಂದಿನ 3 ಚುನಾವಣೆಗಳಲ್ಲೂ ಗೆದ್ದಿದ್ದ ಕಾಂಗ್ರೆಸ್‍ ಅಭ್ಯರ್ಥಿ ಆರ್. ನರೇಂದ್ರ ಪರಾಭವಗೊಂಡು ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಗೆದ್ದಿದ್ದರು. ಆದರೂ ಅತಿ ಹೆಚ್ಚು ಗ್ಯಾರಂಟಿ ಕಾರ್ಡ್ ಹಂಚಿದ್ದಕ್ಕಾಗಿ ಡಿಕೆ ಶಿವಕುಮಾರ್ ಕಾರ್ಯಕರ್ತರಿಗೆ ಟಿವಿ ನೀಡಿದ್ದಾರೆ.