District Collector: ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸುಧಾರಿಸಲು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ತಂದೆ-ತಾಯಿ, ಶಿಕ್ಷಕರು ಸೇರಿದಂತೆ ಇತರರು ಬಹುಮಾನಗಳನ್ನು ನೀಡುತ್ತಾರೆ. ಅಲ್ಲದೆ, ವಾಹನಳು(ಬೈಕ್) ಕೊಡಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ, ಇಲ್ಲೊಬ್ಬ ಕಲೆಕ್ಟರ್(ಜಿಲ್ಲಾಧಿಕಾರಿ) 10ನೇ ತರಗತಿ ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ನೀಡಿದ್ದಾರೆ.
ಇದನ್ನೂ ಓದಿ:ಸ್ನೇಹಿತನನ್ನು ಟ್ರಿಪ್ಗೆ ಕರೆದುಕೊಂಡು ಹೋಗಲು ಹಣ ನೀಡಿದ ವಿದ್ಯಾರ್ಥಿಗಳು; ಪುಟ್ಟ ಬಾಲಕರ ಹೃದಯಸ್ಪರ್ಶಿ Video Viral
ಹೌದು, ಪರೀಕ್ಷೆಯಲ್ಲಿ ಅಂಕ ಸಾಧಿಸಲು ಮತ್ತು ಉತ್ತಮ ಫಲಿತಾಂಶ ಬರಲು ಸರ್ಕಾರ ಏನೆಲ್ಲಾ ಪ್ರಯತ್ನಗಳು ಮಾಡುತ್ತಿದೆ. ಅದರನುಗಣವಾಗಿ, ಇದೀಗ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಜಿಲ್ಲಾಧಿಕಾರಿ ಇಲಾ ತ್ರಿಪಾಠಿ ಎಂಬುವವರು 10ನೇ ತರಗತಿ ಮಕ್ಕಳ ಜತೆ ಸಂವಾದ ನಡೆಸುವಾಗ 10ನೇ ತಗತಿಯಲ್ಲಿ 10/10GPA ಅಂಕ ಪಡೆದವರಿಗೆ ಬಂಪರ್ ಕೊಡುಗೆ ನೀಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಲಿಕಿತ ರೂಪದಲ್ಲಿ ಭರವಸೆ ಈಡೇರಿಸುವುದಾಗಿ ಬರೆದುಕೊಟ್ಟಿದ್ದಾರೆ.
ಶಿಕ್ಷಣದಿಂದ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದು ನಂಬಿದ ಇಲಾ ತ್ರಿಪಾಠಿ, ತೆಲಂಗಾಣ ರಾಜ್ಯದಲ್ಲಿ ಪ್ರಮಾಣಿಕ ಜಿಲ್ಲಾಧಿಕಾರಿಯಂದೇ ಹೆಸರುವಾಸಿಯಾಗಿದ್ದಾರೆ. ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ ಅವರ ಅಧ್ಯಯನದಲ್ಲಿ ಪ್ರೋತ್ಸಾಹಿಸಲು ಅವರು ನವೀನ ಬಂಪರ್ ಕೊಡುಗೆಗಳನ್ನು ಸಹ ಘೋಷಿಸುತ್ತಿದ್ದಾರೆ.
10ನೇ ತರಗತಿಯಲ್ಲಿ 10/10 GPA ಅಂಕಗಳನ್ನು ಗಳಿಸಿದವರನ್ನು ವಿಮಾನದ ಮೂಲಕ ವಿಜಯವಾಡ ಮತ್ತು ಚೆನ್ನೈನಂತಹ ನಗರಗಳಿಗೆ ಕರೆದೊಯ್ಯುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳು ಕೇವಲ ಬಾಯಿ ಮಾತಿನ ಮೂಲಕವಲ್ಲ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಾಗಿ ಲಿಖಿತ ಭರವಸೆ ನೀಡಿದ್ದಾರೆ.(ಏಜೆನ್ಸೀಸ್)