ನ್ಯೂಸ್

ದೆಹಲಿ ಸಿಎಂಗೆ ಬಿಗ್ ರಿಲೀಫ್​; ಕಡೆಗೂ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್​

ಮೋಹನ್​ ಶೆಟ್ಟಿ

ನವದೆಹಲಿ: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಇದೀಗ ಮಧ್ಯಂತರ ಜಾಮೀನು ಘೋಷಿಸಿದ ಸುಪ್ರೀಂಕೋರ್ಟ್​ ಜೂನ್​ 01ರವರೆಗೂ ಜಾಮೀನು ಮಂಜೂರು ಮಾಡಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಧ್ಯಂತರ ಜಾಮೀನು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಕೋರ್ಟ್​ ಜಾಮೀನು ಅರ್ಜಿಯನ್ನು ಮುಂದೂಡಿತ್ತು.

ಇಂದು ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದ ಸುಪ್ರೀಂಕೋರ್ಟ್​, ಜೂನ್​ 01ರವರೆಗೂ ಚುನಾವಣಾ ಪ್ರಚಾರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ ಎಂದು ಕೇಜ್ರಿವಾಲ್​ಗೆ ತಿಳಿಸಿದೆ. ಈ ಮೂಲಕ ಬಿಗ್ ರಿಲೀಫ್ ಪಡೆದ ದೆಹಲಿ ಸಿಎಂಗೆ ಪಕ್ಷದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.