ನ್ಯೂಸ್

ಪ್ರೇಯಸಿಗೆ ಮೆಸೇಜ್ ಮಾಡಿದ ರೂಂ ಮೇಟ್​ಗೆ ಚಾಕು ಇರಿದ ಸ್ನೇಹಿತ!

ಮೈಸೂರು: ಪ್ರೇಯಸಿಗೆ ಮೆಸೇಜ್​ ಮಾಡಿದ ರೂಂ ಮೇಟ್​ಗೆ ಚಾಕು ಇರಿದ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೇಯಸ್ ಎಂಬಾತ ಕೃತ್ಯ ಎಸಗಿದ್ದು, ಗಾಯಗೊಂಡ ಶಿವಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶ್ರೇಯಸ್ ಹಾಗೂ ಪ್ರೀಯಾ ಎಂಬಾಕೆ ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಶ್ರೇಯಸ್ ಹಾಗೂ ಶಿವಕುಮಾರ್ ಸ್ನೇಹಿತರಾಗಿದ್ದು, ಜನತಾನಗರದಲ್ಲಿ ಒಟ್ಟಿಗೆ ವಾಸವಾಗಿದ್ದರು. ಶಿವಕುಮಾರ್ ಕೆಲ ಸಮಯದ ಹಿಂದೆ ಪ್ರೀಯಾಳಿಗೆ ಮೆಸೇಜ್ ಮಾಡಿದ್ದ. ಈ ವಿಚಾರ ಶ್ರೇಯಸ್​ಗೆ ಗೊತ್ತಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಅಲ್ಲದೆ ನನ್ನ ಪ್ರೇಯಸಿಗೆ ಮೆಸೇಜ್ ಮಾಡಬೇಡ ಎಂದು ತಾಕೀತು ಕೂಡ ಮಾಡಿದ್ದ.

ಶ್ರೇಯಸ್ ಎಚ್ಚರಿಕೆ ನೀಡಿದ್ದರೂ ಶಿವಕುಮಾರ್ ಮಾತ್ರ ಆಗಾಗ್ಗೇ ಪ್ರೀಯಾಳಿಗೆ ಮೆಸೇಜ್ ಮಾಡುತ್ತಿದ್ದ. ಇದೇ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಶಿವಕುಮಾರ್​​ಗೆ ಚಾಕುವಿನಿಂದ ಶ್ರೇಯಸ್​ಗೆ ಇರಿದು ಹಲ್ಲೆ ಮಾಡಿದ್ದಾನೆ. ಘಟನೆ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.