ಬೆಂಗಳೂರು: ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ಕಾಲ್ ಶೀಟ್ ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯ ಎಂ.ಎನ್. ಕುಮಾರ್ಗೆ ಸಾರ್ವಜನಿಕವಾಗಿ ಸುದೀಪ್ ವಿರುದ್ಧ ಹೇಳಿಕೆ ನೀಡದಂತೆ ಆದೇಶಿಸಿದೆ.
ಈ ಹಿಂದೆ ನಿರ್ಮಾಪಕ ಎಂ.ಎನ್. ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ವಿರುದ್ಧ ಹಣದ ವಿಚಾರವಾಗಿ ಮತ್ತು ಕಾಲ್ ಶೀಟ್ ಕುರಿತು ಬಹಿರಂಗವಾಗಿ ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ನಿರ್ಮಾಪಕ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆಯನ್ನು ಇಂದು ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯ, ಸುದೀಪ್ ಪರ ಮಧ್ಯಂತರದ ಆದೇಶ ನೀಡಿದೆ.
ಎಂ.ಎನ್. ಕುಮಾರ್ ಮತ್ತು ಸುರೇಶ್ ನಟ ಸುದೀಪ್ ವಿರುದ್ಧ ಅಥವಾ ಅವರ ಕುಟುಂಬದ ಬಗ್ಗೆ ಬಹಿರಂಗ ಹೇಳಿಕೆ ನೀಡುವಂತಿಲ್ಲ. ಮತ್ತು
ಯಾವುದೇ ಮಾಧ್ಯಮಕ್ಕೆ ಹೇಳಿಕೆ ನೀಡಬಾರದು ಎಂದು 9ನೇ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ. ಕೋರ್ಟ್ ವಿಚಾರಣೆಯನ್ನು
ಅಕ್ಟೋಬರ್ 9ಕ್ಕೆ ಮುಂದೂಡಿದೆ.