ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ನಾಗ ಸನ್ನಿಧಿಯಲ್ಲಿ ಅಭಿಷೇಕ ಮಾಡಿ, ಆಶ್ಲೇಷ ಬಲಿಪೂಜೆ

IMG-20230821-WA0004
Published on

ವಿಟ್ಲ: ನಾಗಾರಾಧನೆಯಲ್ಲಿ ವಿಶೇಷ ತತ್ವ ಅಡಗಿದ್ದು, ಪ್ರಕೃತಿಯನ್ನು ಬಿಟ್ಟು ಆರಾಧನೆಗಳಿಲ್ಲ. ಜ್ಞಾನ, ಪರೋಪಕಾರ, ಪ್ರೀತಿ ತುಂಬಿದ ಹೃದಯ ಬೇಕಾಗಿದ್ದು, ಅದು ಇತರರನ್ನು ಆಕರ್ಷಿಸುತ್ತದೆ ಎಂದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ನಾಗ ಸನ್ನಿಧಿಯಲ್ಲಿ ಅಭಿಷೇಕ ಮಾಡಿ, ಆಶ್ಲೇಷ ಬಲಿಪೂಜೆ ಸಂದರ್ಭ ಆಶೀರ್ವಚನ ನೀಡಿದರು.ನಾಗನಲ್ಲಿ ವಿವಿಧ ಪ್ರಬೇಧಗಳಿವೆ. ನಾಗದೇವರಿಗೆ ಮಾಡುವ ಅಭಿಷೇಕವು ಅರಿವಿಲ್ಲದೆಯೇ ಸಲ್ಲಿಸುವ ಪ್ರಕೃತಿಯ ಪೂಜೆಯಾಗಿದೆ. ವೇದಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಸದಾಚಾರದಿಂದ ಸಂಪತ್ತು ಬರುತ್ತದೆ ಎಂದು ಹೇಳಿದರು.

ಸಾಧ್ವೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿತು. ಸಂತೋಷ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net