More

    ಭಾರತದ ಅತ್ಯಂತ ಹಿರಿಯ ಸಾಕಾನೆ ‘ಬಿಜುಲಿ ಪ್ರಸಾದ್’ ಮೃತ್ಯು!

    ಅಸ್ಸಾಂ: ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಭಾರತದ ಅತ್ಯಂತ ಹಿರಿಯ ಸಾಕಾನೆ ಎಂದೇ ಖ್ಯಾತಿ ಪಡೆದುಕೊಂಡಿದ್ದ 89 ವರ್ಷದ ಬಿಜುಲಿ ಪ್ರಸಾದ್ ಇಂದು ವಯೋಸಹಜ ಸಮಸ್ಯೆಗಳಿಂದ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ದೌರ್ಜನ್ಯ ವಿರುದ್ಧ ಸೌಜನ್ಯ ಅಭಿಯಾನ, ಕೆಆರ್‌ಎಸ್ ಪಕ್ಷದಿಂದ ಬೃಹತ್ ಪಾದಯಾತ್ರೆ

    ವಯೋಸಹಜ ಸಮಸ್ಯೆಗಳಿಂದ ತೀವ್ರ ಬಳಲುತ್ತಿದ್ದ ಬಿಜುಲಿ ಪ್ರಸಾದ್, ದಿ ವಿಲಿಯಮ್ಸನ್ ಮಾಗೊರ್ ಗ್ರೂಪ್‌ನ ಬೆಹಾಲಿ ಟೀ ಎಸ್ಟೇಟ್‌ನಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಕೊನೆಯುಸಿರೆಳೆದಿದೆ. ಸಾಕಾನೆಯನ್ನು ಬಹಳ ಅಚ್ಚುಮಚ್ಚಿನಿಂದ ನೋಡಿಕೊಳ್ಳುತ್ತಿದ್ದ ಟೀ ಎಸ್ಟೇಟ್​ ಕೂಲಿ ಕಾರ್ಮಿಕರು ಮತ್ತು ಸ್ಥಳೀಯರು ಸೇರಿದಂತೆ ಅನೇಕರು ಬಿಜುಲಿ ಪ್ರಸಾದ್​ ಸಾವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

    ಇದನ್ನೂ ಓದಿ:  ಏಕರೂಪ ನಾಗರಿಕ ಸಂಹಿತೆ ತಿಳಿವಳಿಕೆ ಅಗತ್ಯ, ಮಾಹಿತಿ ಕಾರ್ಯಕ್ರಮದಲ್ಲಿ ವಕೀಲ ನಂದಕಿಶೋರ್ ಆಶಯ

    ಬಿಜುಲಿ ಪ್ರಸಾದ್ ದಿ ವಿಲಿಯಮ್ಸನ್ ಮಾಗೊರ್ ಗ್ರೂಪ್​ಗೆ ಹೆಮ್ಮೆಯ ಸಂಕೇತವಾಗಿತ್ತು. ಇದನ್ನು ಬಾರ್ಗ್ಯಾಂಗ್ ಟೀ ಎಸ್ಟೇಟ್​ಗೆ ಮಗುವಿದ್ದಾಗಲೇ ಕರೆತರಲಾಗಿತ್ತು. ನಂತರದಲ್ಲಿ ಬಾರ್ಗಂಗ್ ಟೀ ಎಸ್ಟೇಟ್ ಅನ್ನು ಮಾರಾಟ ಮಾಡಿದ ಬಳಿಕ ಅದನ್ನು ಬೆಹಾಲಿ ಎಸ್ಟೇಟ್​ಗೆ ಸ್ಥಳಾಂತರ ಮಾಡಲಾಯಿತು ಎಂದು ಚಹಾ ತೋಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    “ನನಗೆ ತಿಳಿದಿರುವಂತೆ ಬಿಜುಲಿ ಪ್ರಸಾದ್ ಭಾರತದಲ್ಲಿ ದಾಖಲಾದ ಅತ್ಯಂತ ಹಿರಿಯ ಸಾಕಾನೆಯಾಗಿದೆ. ಸಾಮಾನ್ಯವಾಗಿ, ಏಷ್ಯಾದ ಕಾಡಾನೆಗಳು 62-65 ವರ್ಷಗಳವರೆಗೆ ಬದುಕುತ್ತವೆ. ಆದ್ರೆ, ಸಾಕುಪ್ರಾಣಿಗಳಿಗೆ ಉತ್ತಮ ಆರೈಕೆ ಸಿಕ್ಕರೆ ಅವು ಸುಮಾರು 80 ವರ್ಷಗಳವರೆಗೆ ಜೀವಿಸುತ್ತವೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಪ್ರಸಿದ್ಧ ಆನೆ ಶಸ್ತ್ರಚಿಕಿತ್ಸಕ ಡಾ.ಕುಶಾಲ್ ಕನ್ವರ್ ಶರ್ಮಾ ಹೇಳಿದರು,(ಏಜೆನ್ಸೀಸ್).

    ಬಿಡುಗಡೆಯಾಯ್ತು ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್​ ಶೆಟ್ಟಿ ಮಿಸ್ಟರ್​ ಪೋಲಿಶೆಟ್ಟಿ’ ಟ್ರೇಲರ್​; ಫ್ಯಾನ್ಸ್​ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts