More

    ಮಾರ್ಕ್​ ಆ್ಯಂಟನಿ ವಿಶಾಲ್​ ; ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಮಿಂಚಲು ರೆಡಿಯಾದ ತಮಿಳು ನಟ

    | ಹರ್ಷವರ್ಧನ್​ ಬ್ಯಾಡನೂರು

    ತಮಿಳು ನಟ ವಿಶಾಲ್​ “ಲಾಠಿ’ ಚಿತ್ರದ ಮೂಲಕ ಪ್ಯಾನ್​ ಇಂಡಿಯಾ ಹೊರಟಿದ್ದಾರೆ. ಆ ಚಿತ್ರದ ಬಳಿಕ ಇದೀಗ “ಮಾರ್ಕ್​ ಆ್ಯಂಟನಿ’ ಕೂಡ ಪ್ಯಾನ್​ ಇಂಡಿಯಾ ಬಿಡುಗಡೆಯಾಗಲಿದೆ. ಇದೇ ಖುಷಿಯಲ್ಲಿ ವಿಶಾಲ್​ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. “ಮಾರ್ಕ್​ ಆ್ಯಂಟನಿ’ ಶೂಟಿಂಗ್​ ವೇಳೆ ನಡೆದ ಅವಡ, ಆಧ್ಯಾತ್ಮದ ಕಡೆಗಿನ ಒಲವು, ಮುಂದಿನ ಸಿನಿಮಾಗಳು ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

    • “ಮಾರ್ಕ್​ ಆ್ಯಂಟನಿ’ ಚಿತ್ರ ಪ್ರಾರಂಭವಾಗಿದ್ದು ಹೇಗೆ?
      -ನಿರ್ದೇಶಕ ಆದಿಕ್​ ಏಳು ವರ್ಷಗಳಿಂದ ಈ ಕಥೆ ಹೇಳಲು ಪ್ರಯತ್ನಿಸುತ್ತಿದ್ದರು. ನನ್ನ ಡೇಟ್ಸ್​ಗಾಗಿ ಕಾಯುತ್ತಿದ್ದರು. ಚೆನ್ನೈನಲ್ಲಿ ಒಮ್ಮೆ ಭೇಟಿಯಾದೆವು. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ. ಸೈಫೈ ಟೈಮ್​ ಟ್ರಾವೆಲ್​ ಜಾನರ್​ ಕಥೆ ನನಗೆ ತುಂಬ ಇಷ್ಟವಾಯಿತು. ನನ್ನ ಕರಿಯರ್​ನ ಅತಿ ದೊಡ್ಡ ಬಜೆಟ್​ ಚಿತ್ರವಿದು. 5, 10 ವರ್ಷಗಳಿಗೆ ಒಮ್ಮೆ ಇಂತಹ ಕಥೆಗಳು ಬರುತ್ತವೆ. ನನ್ನ ಸಿನಿಮಾ ಜೀವನದಲ್ಲಿ ಒಂದು ಮೈಲಿಗಲ್ಲಾಗುವ ನಿರೀಕ್ಷೆಯಿದೆ.

    ಇದನ್ನೂ ಓದಿ : ಅವರು ಹಾಗೆ ಮಾಡಬಾರದಿತ್ತು ; “ಡ್ರೀಮ್​ ಗರ್ಲ್​ 2′ ಚಿತ್ರತಂಡದ ಬಗ್ಗೆ ನಟಿ ನುಶ್ರತ್​ ಭರೂಚಾ ಬೇಸರ

    ಮಾರ್ಕ್​ ಆ್ಯಂಟನಿ ವಿಶಾಲ್​ ; ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಮಿಂಚಲು ರೆಡಿಯಾದ ತಮಿಳು ನಟ
    • ನಿಮ್ಮ ಪಾತ್ರದ ಬಗ್ಗೆ…
      – ನಾನಿಲ್ಲಿ ಮಾರ್ಕ್​ ಮತ್ತು ಆ್ಯಂಟನಿ ಎರಡೂ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. 1975ರಲ್ಲಿ ಅಪ್ಪ ಆ್ಯಂಟನಿ ಗ್ಯಾಂಗ್​ಸ್ಟರ್​, 1990ರಲ್ಲಿ ಮಗ ಮಾರ್ಕ್​ ಮೆಕ್ಯಾನಿಕ್​ ಕಥೆ ಒಟ್ಟಿಗೆ ಸಾಗುತ್ತಿರುತ್ತದೆ. ಅವರಿಬ್ಬರೂ ಹೇಗೆ ಕನೆಕ್ಟ್​ ಆಗುತ್ತಾರೆ ಎಂಬುದೇ ಕಥೆ. ಚಾಲೆಂಜಿಂಗ್​ ಪಾತ್ರ. ಚಿತ್ರದಲ್ಲಿ ಹಲವು ಸರ್​ಪ್ರೈಸ್​ಗಳಿವೆ. ರಿಲೀಸ್​ ಆದ ಬಳಿಕ ಜನರಿಗೆ ಗೊತ್ತಾಗಲಿದೆ.
    • ಎಸ್​ಜೆ ಸೂರ್ಯ ಜತೆ ನಟಿಸಿದ ಅನುಭವ ಹೇಗಿತ್ತು?
      – ಎಸ್​ಜೆ ಸೂರ್ಯ ಅವರನ್ನು 25 ವರ್ಷಗಳಿಂದ ಸ್ಕ್ರೀನ್​ ಮೇಲೆ ನೋಡುತ್ತಿದ್ದೇನೆ. ನಾನು ನಟನಾದ ಬಳಿಕ ಅವರ ಪರಿಚಯ. 25 ವರ್ಷಗಳ ಹಿಂದೆ ಅವರಲ್ಲಿ ಏನು ಫೈರ್​ ಇತ್ತೋ ಈಗಲೂ ಅದೇ ಫೈರ್​ ಇದೆ. ಈ ಚಿತ್ರದಲ್ಲಿ ಅವರೂ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ ನಟಿಸಿದ್ದು ಆಕ್ಟಿಂಗ್​ ಇನ್ಸ್​ಟಿಟ್ಯೂಟ್​ನಲ್ಲಿ ಕಲಿತಷ್ಟು ಅನುಭವ ನೀಡಿತು. 3 ಪೇಜ್​ ಡೈಲಾಗ್​ ಒಂದು ಟೇಕ್​ನಲ್ಲಿ ಕೊಡುತ್ತಾರೆ.
    • ಚಿತ್ರೀಕರಣದ ವೇಳೆ ಅವಡ ಸಂಭವಿಸಿತ್ತು…
      – ಸೂರ್ಯ ಅವರು ನನಗೆ ಒದ್ದು, ನಾನು ಬೀಳಬೇಕಿತ್ತು. ಆಗ ಟ್ರಕ್​ ಗೋಡೆಗೆ ಗುದ್ದಿ ನಿಲ್ಲಬೇಕಿತ್ತು. ಆದರೆ ಟ್ರಕ್​ ನನ್ನೆಡೆಗೆ ನುಗ್ಗಿಬಂತು. ನಾನು ಅದರ ವಿರುದ್ಧವಾಗಿ ಮುಖ ಮಾಡಿದ್ದ ಕಾರಣ, ಅದು ಬಂದಿದ್ದೂ ಗೊತ್ತಾಗಲಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಟನೆ ನಡೆಯಿತು. 10 ನಿಮಿಷ ಏನು ಮಾಡುತ್ತಿದ್ದೇನೆ, ಎಲ್ಲಿದ್ದೇನೆ ಎಂಬುದೇ ಗೊತ್ತಾಗಲಿಲ್ಲ. ಆ ಟನೆಯ ಬಳಿಕ ಶೂಟಿಂಗ್​ ಅಷ್ಟಕ್ಕೆ ನಿಲ್ಲಿಸಿ ಪ್ಯಾಕಪ್​ ಮಾಡಿಬಿಟ್ಟೆವು. ಅದು ಸಾವನ್ನು ತುಂಬ ಹತ್ತಿರದಿಂದ ನೋಡಿದ ಅನುಭವವಾಯಿತು. ಆ ಟ್ರಕ್​ ಹಾಗೇ ಮುಂದೆ ಬಂದಿದ್ದರೆ ನಾನಿವತ್ತು ನಿಮ್ಮೊಂದಿಗೆ ಮಾತನಾಡುತ್ತಿರಲಿಲ್ಲ.

    ಇದನ್ನೂ ಓದಿ : 1 ಚಿತ್ರ, 4 ಭಾಷೆ, 24 ಟ್ಯೂನ್​ಗಳು! ಪ್ಯಾನ್​ ಇಂಡಿಯಾ ಸಿಕಾಡಾ ಚಿತ್ರತಂಡದ ವಿಭಿನ್ನ ಪ್ರಯತ್ನ

    ಮಾರ್ಕ್​ ಆ್ಯಂಟನಿ ವಿಶಾಲ್​ ; ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಮಿಂಚಲು ರೆಡಿಯಾದ ತಮಿಳು ನಟ
    • ಇತ್ತೀಚೆಗೆ ಆಧ್ಯಾತ್ಮದತ್ತ ಹೆಚ್ಚು ಗಮನ ಹರಿಸಿದ್ದೀರಂತೆ.
    • ದೇವಸ್ಥಾನಕ್ಕೆ ಹೋದಾಗ ನಮಗೆ ಒಂದೊಂದು ವಿಶೇಷವಾದ ಅನುಭವಗಳಾಗುತ್ತವೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಪ್ರತಿ ಹಳ್ಳಿಗಳಲ್ಲೂ ವೀರಭದ್ರಸ್ವಾಮಿಯನ್ನು ಕಾಣಬಹುದು. ಊರನ್ನು ಕಾಯುವ ದೇವರು ವೀರಭದ್ರಸ್ವಾಮಿ. “ಮಾರ್ಕ್​ ಆ್ಯಂಟನಿ’ ಚಿತ್ರದ ಪ್ರಮುಖ ಸನ್ನಿವೇಶದ ಚಿತ್ರೀಕರಣದಲ್ಲಿ 40 ಡಾನ್ಸರ್​ಗಳು, 500ಕ್ಕೂ ಹೆಚ್ಚು ಜನರಿದ್ದರು. 8 ದಿನಗಳ ಕಾಲ ಶೂಟಿಂಗ್​ ಮಾಡಬೇಕಿತ್ತು. ಆದರೆ, ಎರಡು ದಿನ ಮಳೆಯ ಕಾರಣ ಕ್ಯಾನ್ಸಲ್​ ಮಾಡಬೇಕಾಯಿತು. ಒಮ್ಮೆ ವೀರಭದ್ರಸ್ವಾಮಿಯ ದೊಡ್ಡ ಪ್ರತಿಮೆಗೆ ಪೇಂಟ್​ ಮಾಡುವಾಗ ಚಿತ್ರತಂಡದವರೊಬ್ಬರು ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡರು. ಆಗ ಒಂದು ತಿಂಗಳು ಮತ್ತೆ ಮುಂದೂಡಬೇಕಾಯಿತು. ಮರಳಿ ಬಂದು ಪೂಜೆ ನಡೆಸಿ ಶೂಟಿಂಗ್​ ಮತ್ತೆ ನಡೆಸಿದೆವು. ಆರನೇ ದಿನ ಶೂಟಿಂಗ್​ ವೇಳೆ 5 ನಿಮಿಷ ನಾನು ಸಂಪೂರ್ಣವಾಗಿ ಮೈಮರೆತಿದ್ದೆ. ಇಂತಹ ಅನುಭವಗಳು ನನ್ನಲ್ಲೂ ನಂಬಿಕೆ ಹೆಚ್ಚಿಸಿದೆ. ಜತೆಗೆ ನಾನು ಆಗಾಗ ಕೊಡಗಿನ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತೇನೆ. ನನ್ನ ಎರಡನೇ ತಾಯಿ ಆಕೆ.

    ಇದನ್ನೂ ಓದಿ : ವ್ಯಾಕ್ಷಿನ್ ವಾರ್‌ನಲ್ಲಿ ಕಾಂತಾರ ಚೆಲುವೆ; ಸಲಾರ್ ರಿಲೀಸ್ ದಿನವೇ ವಿವೇಕ್ ಅಗ್ನಿಹೋತ್ರಿ ಸಿನಿಮಾ

    ಮಾರ್ಕ್​ ಆ್ಯಂಟನಿ ವಿಶಾಲ್​ ; ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಮಿಂಚಲು ರೆಡಿಯಾದ ತಮಿಳು ನಟ
    • “ಮಾರ್ಕ್​ ಆ್ಯಂಟನಿ’ಯಲ್ಲಿ ಏನನ್ನು ನಿರೀಸಬಹುದು?
      – ಟೈಮ್​ ಟ್ರಾವೆಲ್​ ಕುರಿತ ಸಿನಿಮಾ, ದೃಶ್ಯವೈಭವವಿದೆ. ಕರೊನಾ ಬಳಿಕ ಥಿಯೇಟರ್​ಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಆಡಿಯನ್ಸ್​ನ ಮತ್ತೆ ಥಿಯೇಟರ್​ಗೆ ಬರುವಂತೆ ಮಾಡುವ ಸಿನಿಮಾ. ಐದು ಭಾಷೆಗಳಲ್ಲಿ ರಿಲೀಸ್​ ಆಗಲಿದೆ. ಸೆ. 15ರಂದು ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಸೆ. 22 ಹಿಂದಿಯಲ್ಲಿ ಬಿಡುಗಡೆಯಾಗಲಿದೆ.
    • ಸಿನಿಮಾ ನಿರ್ದೇಶಿಸಲು ಸಿದ್ಧತೆ ಹೇಗೆ ನಡೆಯುತ್ತಿದೆ.
      – 34ನೇ ಚಿತ್ರವನ್ನು ನಾನೇ ನಿರ್ದೇಶಿಸಲಿದ್ದೇನೆ. “ತುಪ್ಪರಿವಾಲನ್​ 2′ ಮುಂದಿನ ವರ್ಷ ಪ್ರಾರಂಭವಾಗಲಿದೆ. ಲಂಡನ್​ನಲ್ಲಿ ನಡೆಯುವ ಕೊಹಿನೂರ್​ ವಜ್ರದ ಕುರಿತ ಕಥೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts