More

    ವ್ಯಾಕ್ಷಿನ್ ವಾರ್‌ನಲ್ಲಿ ಕಾಂತಾರ ಚೆಲುವೆ; ಸಲಾರ್ ರಿಲೀಸ್ ದಿನವೇ ವಿವೇಕ್ ಅಗ್ನಿಹೋತ್ರಿ ಸಿನಿಮಾ

    ಕನ್ನಡದ ಹಿಟ್ ಸಿನಿಮಾ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಈಗ ಬಾಲಿವುಡ್ ಅಂಗಳಕ್ಕೆ ಹಾರಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಕಾಶ್ಮೀರಿ ಹತ್ಯಾಕಾಂಡದ ಕುರಿತಾದ ‘ದಿ ಕಾಶ್ಮೀರ್ ಫೈಲ್ಸ್’ ಬಳಿಕ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸುತ್ತಿರುವ ಮತ್ತೊಂದು ನೈಜ ಘಟನೆ ಆಧಾರಿತ ಚಿತ್ರ ‘ದಿ ವ್ಯಾಕ್ಸಿನ್ ವಾರ್’.

    ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕನ್ನಡದ ಸಪ್ತಮಿ ಗೌಡ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಕರೊನಾ ಸಂದರ್ಭದಲ್ಲಿ ಹೇಗೆ ದೇಶಾದ್ಯಂತ ವ್ಯಾಕ್ಸಿನ್ ನೀಡಲಾಯಿತು ಎಂಬುದರ ಸುತ್ತ ಸಾಗುವ ಕಥೆ ಇದು ಎನ್ನಲಾಗಿದೆ. ಈ ಸಾಹಸದ ಹಿಂದೆ ಭಾರತದ ವಿಜ್ಞಾನಿಗಳ ಪರಿಶ್ರಮ ಎಷ್ಟಿದೆ ಎನ್ನುವುದರ ಕುರಿತು ಚಿತ್ರ ಬೆಳಕು ಚೆಲ್ಲುತ್ತದೆ. ಇತ್ತೀಚೆಗಷ್ಟೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಸಪ್ತಮಿ ಗೌಡ ಜತೆಗೆ ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

    ಸೆಪ್ಟಂಬರ್ 28ರಂದೇ ‘ದಿ ವ್ಯಾಕ್ಸಿನ್ ವಾರ್’ 11 ಭಾಷೆಯಲ್ಲಿ ತೆರೆ ಕಾಣಲಿದೆ. ಅದೇ ದಿನ ಪ್ರಭಾಸ್ ಅಭಿನಯದ ‘ಸಲಾರ್’ ಕೂಡ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ, ‘ನಾನಿಲ್ಲಿ ಕಾಂಪಿಟೇಷನ್ ಮಾಡಲು ಬಂದಿಲ್ಲ. ಸಿನಿಮಾ ಮಾಡಲು ಬಂದಿದ್ದೇನೆ. ಹೀಗಾಗಿ ನನಗೆ ಈ ಸಿನಿಮಾ ವಾರ್ ಬಗ್ಗೆ ನಂಬಿಕೆ ಇಲ್ಲ’ ಎಂದಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts