More

    ಫಿಕ್ಸ್​​ ಆಯ್ತು ವಿಶಾಲ್ ನಟನೆಯ ‘ಮಾರ್ಕ್​​​​ ಆಂಟನಿ’​​ ಚಿತ್ರದ ರಿಲೀಸ್​​ ಡೇಟ್​!

    ತಮಿಳುನಾಡು: ಕಾಲಿವುಡ್ ನಟ ವಿಶಾಲ್ ಮತ್ತು ಎಸ್.ಜೆ. ಸೂರ್ಯ ಅಭಿನಯದ ಹೊಸ ಗ್ಯಾಂಗ್​​ಸ್ಟರ್​​ ಚಿತ್ರ ‘ಮಾರ್ಕ್ ಆಂಟನಿ’ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಧಿಕ್ ರವಿಚಂದ್ರನ್ ಬರೆದು ನಿರ್ದೇಶಿಸಿರುವ ಈ ಚಿತ್ರವು ಇದೀಗ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.

    ಇದನ್ನೂ ಓದಿ: ಕಾಂಗ್ರೆಸ್​ ಅಡಳಿತದಲ್ಲಿ ಗೂಂಡಾ ರಾಜಕಾರಣ ರಾರಾಜಿಸುತ್ತಿದೆ: ನಳಿನ್​ ಕುಮಾರ್​ ಕಟೀಲ್

    ತಮಿಳು ನಟ ವಿಸಾಲ್​​ ಅಭಿನಯದ ಮಾರ್ಕ್ ಆಂಟನಿ ಚಿತ್ರ ಇದೇ ಸೆಪ್ಟೆಂಬರ್ 15, 2023 ರಂದು ಬಹುತೇಕ ಥಿಯೇಟರ್‌ಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ತಯಾರಕರು ಅಧಿಕೃತ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಸದ್ಯ ಈ ಚಿತ್ರವು ಚಂದ್ರಮುಖಿ 2, ಸ್ಕಂದ ಸಿನಿಮಾಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನಡೆಸಲು ಸಜ್ಜಾಗಿದೆ. ಮಾರ್ಕ್​​ ಆಂಟನಿ ಚಿತ್ರದಲ್ಲಿ ನಾಯಕನಾಗಿ ವಿಶಾಲ್​ ಮತ್ತು ನಾಯಕಿಯಾಗಿ ರಿತು ವರ್ಮಾ ನಟಿಸಿದ್ದಾರೆ. ಸುನೀಲ್, ಅಭಿನಯ, ಕಿಂಗ್ಸ್ಲಿ ಮತ್ತು ವೈ.ಜಿ. ಮಹೇಂದ್ರನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts