ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪೊಲೀಸರು ತಮ್ಮ ಎಂಟು ತಿಂಗಳ ಶಿಶುವನ್ನು ಮಾರಾಟ ಮಾಡಿದ್ದಕ್ಕಾಗಿ ಪಾಪಿ ದಂಪತಿಯನ್ನು ಬಂಧಿಸಿದ್ದಾರೆ.
ಈ ದಂಪತಿಗಳು ಹೊಚ್ಚ ಹೊಸ ಫೋನ್ ಖರೀದಿಸಿರುವುದು ಕಂಡ ಸ್ಥಳೀಯರು, ಮಗು ಕಾಣೆ ಆಗಿದೆ ಎನ್ನುವುದನ್ನೂ ಗಮನಿಸಿದ್ದಾರೆ. ಹೀಗಾಗಿ ಅನುಮಾನದಿಂದ ಸ್ಥಳೀಯರು, ಈ ವಿಷಯವನ್ನು ಪೊಲೀಸರಿಗೆ ವರದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರೂ ದಂಪತಿಗಳ ಕರ್ಮಕಾಂಡ ಕಂಡು ಆಘಾತಕ್ಕೆ ಒಳಗಾಗಿದ್ದಾರೆ.
ಸ್ಥಳೀಯರ ಪ್ರಕಾರ, ಮಗಳನ್ನು ಹೊಂದಿರುವ ಈ ದಂಪತಿ, ಹನಿಮೂನ್ಗಾಗಿ ರಾಜ್ಯದಾದ್ಯಂತ ಪ್ರಯಾಣಿಸಿದ್ದು ಡಿಘಾ ಮತ್ತು ಮಂದರ್ಮಾನಿ ಬೀಚ್ಗಳು ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದರು.
ಈ ಘಟನೆ ಭಾನುವಾರ (ಜುಲೈ 24) ನಲ್ಲಿ ಬೆಳಕಿಗೆ ಬಂದಿದ್ದರೂ, ಮಗುವಿನ ಮಾರಾಟ ಕನಿಷ್ಠ ಒಂದೂವರೆ ತಿಂಗಳ ಹಿಂದೆ ನಡೆದಿದೆ. ಜಯದೇವ್ ಘೋಷ್ ಮತ್ತು ಸತಿ ಎಂದು ಗುರುತಿಸಲ್ಪಟ್ಟ ದಂಪತಿ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸದ್ಯ ಮಗುವನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: ಮಗು ಮಾರಾಟ ಪ್ರಕರಣ ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ
"ಜಾಯೆವ್ ಘೋಷ್ ಮತ್ತು ಸತಿ ತಮ್ಮ ಮಗುವನ್ನು ರೂ. 2 ಲಕ್ಷಕ್ಕೆ ಮಾರಿದ್ದಾರೆ. ನಂತರ, ಅವರು ಇದೇ ಹಣದಿಂದ ಹನಿಮೂನ್ಗಾಗಿ ಡಿಘಾ ಸಮುದ್ರ ಬೀಚ್ನಂತಹ ಅನೇಕ ಸ್ಥಳಗಳಿಗೆ ಭೇಟಿ ನೀಡಿದರು. ಅವರು ಮೊಬೈಲ್ ಫೋನ್ ಸಹ ಖರೀದಿಸಿದರು, ಎಂದು "ಲಕ್ಷ್ಮೀ ಕುಂಡು, ನೆರೆಯವರು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಹೆತ್ತ ಮಗುವನ್ನೇ 800 ರೂ.ಗೆ ಮಾರಾಟ ಮಾಡಿದ ತಾಯಿ…
ಅಷ್ಟಕ್ಕೇ ನಿಲ್ಲದ ಪಕ್ಕದ ಮನೆ ಲಕ್ಷ್ಮೀ ಕುಂಡು, ಸತಿ ಗಾಂಜಾ ಹಾಗೂ ಚರಸ್ಗಾಗಿ ಮಗುವನ್ನು ಮಾರಾಟ ಮಾಡಿದ್ದು, ಅದರೊಂದಿಗೆ ಪರಪುರುಷರನ್ನೂ ಮನೆಗೆ ಕರೆದುಕೊಂಡು ಬರುತ್ತಿದ್ದಳು ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)