ನ್ಯೂಸ್

ಎಕ್ಸಾಂ ದಿನವೇ 8ನೇ ಮಹಡಿಯಿಂದ ಹಾರಿ ಪ್ರಾಣ ಕಳ್ಕೊಂಡ ವಿದ್ಯಾರ್ಥಿ: ಕಾರಣ ಇದೇನಾ?

ಬೆಂಗಳೂರು: ವಿದ್ಯಾರ್ಥಿಯೊಬ್ಬ ತನ್ನ ಎಕ್ಸಾಂ ದಿನವೇ ಎಂಟನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡ ಪ್ರಕರಣ ನಡೆದಿದೆ. ಕೆಲವು ತಿಂಗಳ ಹಿಂದೆ ವಿದ್ಯಾರ್ಥಿಯೊಬ್ಬ ತಪ್ಪನ್ನು ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದ ಮಾದರಿಯಲ್ಲೇ ಈ ವಿದ್ಯಾರ್ಥಿಯ ಪ್ರಕರಣ ನಡೆದಿದೆ ಎನ್ನಲಾಗಿದೆ.

ಮೂಲತಃ ಮಂಗಳೂರಿನ ಆದಿತ್ಯ ಪ್ರಭು (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಬೆಂಗಳೂರಿನ ಪಿಇಎಸ್​ ಕಾಲೇಜಿನಲ್ಲಿ ಬಿಟೆಕ್ ಸೆಕೆಂಡ್ ಸೆಮಿಸ್ಟರ್​​ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂದು ಪರೀಕ್ಷೆ ಕೂಡ ನಡೆಯುತ್ತಿತ್ತು.

ಇವತ್ತು ಪರೀಕ್ಷೆ ಸಂದರ್ಭದಲ್ಲಿ ಈತ ಕಾಪಿ ಮಾಡಿದ್ದು, ಆ ವಿಷಯ ಗೊತ್ತಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ಆರೋಪವೂ ಇದೆ. ಆ ಕಾರಣಕ್ಕೆ ಈತ ಎಂಟನೇ ಮಹಡಿಯಿಂದ ಹಾರಿಕೊಂಡಿದ್ದಾನೆ ಎನ್ನಲಾಗಿದೆ ಎಂದು ದಕ್ಷಿಣವಲಯದ ಡಿಸಿಪಿ ಕೃಷ್ಣಕಾಂತ್ ಹೇಳಿದ್ದಾರೆ.

ಕಳೆದ ವರ್ಷದ ನವೆಂಬರ್​ನಲ್ಲಿ ಬೆಂಗಳೂರಿನ ಖಾಸಗಿ ಶಾಲೆಯೊಂದರ ಮೊಹಿನ್ ಎಂಬ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದಿದ್ದು, ಶಿಕ್ಷಕರು ಆ ತಪ್ಪಿಗಾಗಿ ಹೊರಗೆ ನಿಲ್ಲಿಸಿದ್ದರು ಎಂದು ಮನನೊಂದು, ಹತ್ತನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ.