ಕಳೆದ ಎರಡು ತಿಂಗಳಿನಿಂದ ಮಂಡಿ ನೋವಿನ ಬಳಲುತ್ತಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ(CM Siddaramaiah) ರೊಟಿನ್ ಚೆಕ್ಅಪ್ಗಾಗಿ ಮಂಗಳವಾರ ದಿಢೀರ್ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ.
ಇತ್ತೀಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿ ನೋವಿನ ಹಿನ್ನೆಲೆ ಆಸ್ಪತ್ರೆಯಲ್ಲಿ ದಾಖಲಾಗಿ ಸತತ 2 ಗಂಟೆಗೂ ಅಧಿಕ ಕಾಲ ಚಿಕಿತ್ಸೆ ಪಡೆದಿದ್ದರು. ಅಲ್ಲದೆ, ಸಿಎಂ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಮೊಣಕಾಲಿಗೆ ನಿ-ಪ್ಯಾಡ್ ಹಾಕಿದ್ದರು. ಡಿಸ್ಚಾರ್ಜ್ ಆದ ಬಳಿಕ ಎರಡು ತಿಂಗಳು ಕಾಲ ರೆಸ್ಟ್ ಮಾಡುವಂತೆ ಸಲಹೆ ನೀಡಿದ್ದರು.
2 ತಿಂಗಳ ಬಳಿಕ ಇದೀಗ ಮತ್ತೆ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ. ಇನ್ನು ಆರೋಗ್ಯ ತಪಾಸಣೆಗಾಗಿ ಸಚಿವ ಜಮೀರ್ ಅಹಮ್ಮದ್, ರಾಜಕೀಯ ಕಾರ್ಯದರ್ಶಿ ಗೋವಿಂದ್ ರಾಜ್ ಜತೆಗಿದ್ದರು. ಸದ್ಯಕ್ಕೆ ಸಿಎಂ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.