Hawala Money : ವಿದೇಶದಿಂದ ಆಕ್ರಮವಾಗಿ ಚಿನ್ನತಂದ ಆರೋಪದ ಮೇಲೆ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾ.03 ರಂದು ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದರು. ಇದೀಗ ಈ ಪ್ರಕರಣ ಹಲವು ತೀರುವುಗಳನ್ನು ಪಡೆದುಕೊಂಡಿದ್ದು, ಹವಾಲಾ ಹಣದ ಮೂಲಕ ಚಿನ್ನ ಖರೀದಿಸಲಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಈ ಕುರಿತು ಕಂದಾಯ ಗುಪ್ತಾಚರ ನಿರ್ದೇಶನಾಲಯ(ಡಿಆರ್ಐ) ಮಂಗಳವಾರ(ಮಾ.25) ನ್ಯಾಯಲಯಕ್ಕೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಶಿಕ್ಷಣ ಮೇಳ|Global Education Fair
ಬೆಂಗಳೂರಿನನ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ ಡಿಆರ್ಐನ ವಕೀಲ ಮಧು ರಾಂ, ಆರೋಪಿಯು ಅನಧಿಕೃತ ವಿಧಾನಗಳ ಮೂಲಕ ಹಣಕಾಸಿನ ವಹಿವಾಟು ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ.
ಪ್ರತಿವಾದಿ ಮತ್ತು ಪ್ರಾಸಿಕ್ಯೂಷನ್ ಎರಡೂ ಕಡೆಯ ವಾದಗಳ ವಿವರವಾದ ವಿಚಾರಣೆಯ ನಂತರ, ವಿಶೇಷ ನ್ಯಾಯಾಲಯದ ಪೀಠವು ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಮಾ.27 ರವರೆಗೆ ಕಾಯ್ದಿರಿಸಿದೆ.
ರನ್ಯಾ ರಾವ್ ಪ್ರಕರಣ ಏನು..?
ನಟಿ ರನ್ಯಾ ಸೋಮವಾರ (ಮಾ.03) ರಾತ್ರಿ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದರು. ಮೊದಲೇ ಆಕೆಯ ಮೇಲೆ ಅನುಮಾನ ಇದ್ದ ಕಾರಣ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದರು. ಈ ವೇಳೆ ಅವರಿಗೆ ಅಚ್ಚರಿಯೊಂದು ಎದುರಾಗಿತ್ತು. ಅದೇನೆಂದರೆ, ಭಾರಿ ಪ್ರಮಾಣದ ಚಿನ್ನ ರನ್ಯಾ ಬಳಿ ಪತ್ತೆಯಾಯಿತು. ಆಕೆ ತಂದಿದ್ದ 14.8 ಕೆಜಿ ಚಿನ್ನದಲ್ಲಿ ಆಕೆ ತೊಟ್ಟಿದ್ದ ಬಟ್ಟೆಯಲ್ಲೇ ಮುಕ್ಕಾಲು ಭಾಗ ಇತ್ತಂತೆ. ಉಳಿದ ಚಿನ್ನವನ್ನು ಬಟ್ಟೆಯಲ್ಲಿ ಸುತ್ತಿ, ಬ್ಯಾಗ್‌ನಲ್ಲಿ ಇಟ್ಟಿರುವುದು ಪತ್ತೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿ, ಕಾರ್ಯಕರ್ತರಿಗೆ ಸಚಿವ ಮಧು ಕರೆ
ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ರನ್ಯಾ ಅವರು ಡಿಐಜಿ ರಾಮಚಂದ್ರ ರಾವ್ 2ನೇ ಪತ್ನಿ ಮೊದಲ ಗಂಡನ ಮಗಳಾಗಿದ್ದಾರೆ. ಅಂದಹಾಗೆ ರನ್ಯಾ ರಾವ್ ಅವರು ನಟ ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಗಣೇಶ್ ನಟನೆಯ ಪಟಾಕಿ ಸಿನಿಮಾದಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್)
ಊದಿಕೊಂಡ ಕಣ್ಣು, ಬದಲಾದ ಮುಖ ಚಹರೆ.. ನಟಿ ರನ್ಯಾ ರಾವ್ ಮೇಲೆ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆಯೇ? | Ranya Rao
ಸಂವಿಧಾನ ಬದಲಿಸುವ ಹೇಳಿಕೆ ಕೊಟ್ಟಿದ್ದರೆ ಇಂದೇ ರಾಜಕೀಯ ನಿವೃತ್ತಿ: DK ಶಿವಕುಮಾರ್